ಹುಬ್ಬಳ್ಳಿ: ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆದರೆ ಚುನಾವಣೆ ನಡೆಯುವ ಮುನ್ನವೇ ಕಾಂಗ್ರೆಸ್ ನಾಯಕರೊಬ್ಬರು ಈಗಾಗಲೇ ಎಂ.ಎಲ್.ಸಿ ಅಂತ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ.
ಹೌದು. ಕಾಂಗ್ರೆಸ್ ಮುಖಂಡ ನಾಗರಾಜ ಗೌರಿಯವರು ಚುನಾವಣೆ ನಡೆಯುವ ಮೊದಲೇ ನಾನು ಎಂ ಎಲ್ ಸಿ ಎಂದು ತಮ್ಮ ಇನ್ನೋವಾ ಕಾರಿಗೆ ಪಾಸ್ ಹಾಕಿಕೊಂಡು ತಿರುಗಾಡುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ವಿಧಾನ ಪರಿಷತ್ ಕಾರ್ಯದರ್ಶಿ ಶ್ರೀನಿವಾಸ ಹೆಸರಿನ ಸಹಿ ಇರುವ ಪಾಸ್ ಇದಾಗಿದೆ. ಆದರೆ ಪಾಸ ಮೇಲೆ ಎಂ ಎಲ್ ಸಿ ಎಂದು ಇದೆ. ಅಲ್ಲದೇ ನಾಗರಾಜ ಅವರ ಇನ್ನೋವಾ ಕಾರಿನ ನಂಬರ್ ಹಾಗೂ ಪಾಸನ ಕಾರಿನ ಮೇಲೆ ಇರುವ ನಂಬರ್ ಕೂಡ ಒಂದೇ ಆಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
Kshetra Samachara
06/11/2021 12:33 pm