ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಾನಗಲ್ ಸೋಲು ನಮಗೆ ಎಚ್ಚರಿಕೆ ಗಂಟೆ: ಸಂಕಲ್ಪ ಶೆಟ್ಟರ್

ಹುಬ್ಬಳ್ಳಿ: ಹಾನಗಲ್ ಉಪಚುನಾವಣೆಯಲ್ಲಿ ಎಲ್ಲ ರೀತಿಯ ಪ್ರಯತ್ನವನ್ನು ಮಾಡಿದ್ದೇವೆ. ಎಲ್ಲ ಲೀಡರ್ ಕೂಡ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದರೆ ಎಲ್ಲೋ ಆಂತರಿಕ ಸಮಸ್ಯೆಯಿಂದ ಸೋಲು ಅನುಭವಿಸುವಂತಾಗಿದೆ ಎಂದು ಬಿಜೆಪಿ ಮುಖಂಡ ಸಂಕಲ್ಪ ಶೆಟ್ಟರ್ ಹೇಳಿದರು.

ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ ಹಿನ್ನಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಾನಗಲ್ ಚುನಾವಣೆಯಲ್ಲಿ ನಾವು ಕಡಿಮೆ ಅಂತರದಿಂದ ಸೋಲನ್ನು ಅನುಭವಿಸಿದ್ದೇವೆ. ಆದರೆ ಎಷ್ಟೇ ಅಂತರದಿಂದ ಸೋತರೂ ಸೋಲು ಸೋಲೆ ಎಂದರು.

ಇನ್ನೂ ಈ ಬಗ್ಗೆ ನಾವು ಎಲ್ಲ ನಾಯಕರ ನೇತೃತ್ವದಲ್ಲಿ ಸಭೆ ನಡೆಸಿ ಈ ಸೋಲನ್ನು ಎಚ್ಚರಿಕೆ ಗಂಟೆ ಎಂದು ತಿಳಿದುಕೊಂಡು ಮತ್ತೇ ಪಕ್ಷವನ್ನು ಬಲ ಪಡಿಸಿ ಬಿಜೆಪಿಯ ಅಭಿವೃದ್ಧಿಗೆ ಚಿಂತನೆ ನಡೆಸಲಾಗುತ್ತದೆ ಎಂದು ಅವರು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

02/11/2021 09:46 pm

Cinque Terre

82.68 K

Cinque Terre

25

ಸಂಬಂಧಿತ ಸುದ್ದಿ