ಹುಬ್ಬಳ್ಳಿ: ಕುರುಬರ ಮೇಲೆ ಹಾಗೂ ಕಂಬಳಿಯ ಮೇಲೆ ಸಾಕಷ್ಟು ಗೌರವವನ್ನು ಇಟ್ಟುಕೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿಯವರು ತಮ್ಮ ಅಧಿಕಾರದ ಅವಧಿಯಲ್ಲಿಯೇ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕನಕದಾಸರ ಹೆಸರನ್ನು ನಾಮಕರಣ ಮಾಡಬೇಕು ಎಂದು ಮನಸೂರು ಮಠದ ಡಾ.ಬಸವರಾಜ ದೇವರು ಆಗ್ರಹಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಭಾಗದವರೇ ಸಿಎಂ ಆಗಿದ್ದು, ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ದಾಸ ಶ್ರೇಷ್ಠ ಕನಕದಾಸರ ಹೆಸರನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಇಡಬೇಕು. ಅಲ್ಲದೆ ಈ ಹಿಂದೆ ಕೂಡ ಕಂಬಳಿಯ ಬಗ್ಗೆ ಹಾಗೂ ಕುರುಬರ ಬಗ್ಗೆ ಸಾಕಷ್ಟು ಪ್ರೀತಿ ವಿಶ್ವಾಸವನ್ನು ತೋರಿರುವ ಸಿಎಂ ಬೊಮ್ಮಾಯಿಯವರು ಕನಕದಾಸರ ಹೆಸರನ್ನು ನಾಮಕರಣ ಮಾಡುವ ಮೂಲಕ ಕನಕದಾಸರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಮಾಡಬೇಕು ಎಂದು ಅವರು ಹೇಳಿದರು.
Kshetra Samachara
02/11/2021 12:55 pm