ಹುಬ್ಬಳ್ಳಿ: ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಮೇಲ್ಸೇತುವೆ ಕಾಮಗಾರಿ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ, ರಾಜ್ಯ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಆರೋಪಿಸಿ ಉತ್ತರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ಉತ್ತರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಜಂಟಿಯಾಗಿ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿತು.
ನಗರದ ತಹಶೀಲ್ದಾರರ ಕಚೇರಿ ಎದುರುಗಡೆ ಉಳಿಸಿ ಉಳಿಸಿ ವಾಣಿಜ್ಯ ನಗರಿಯ ವಾಣಿಜ್ಯ ಉಳಿಸಿ, ಸಾಕು ಮಾಡಿ ದುಡ್ಡಿನ ಭೋಜನ ಸ್ವಲ್ಪ ನೋಡಿ ಈ ರಸ್ತೆಗಳನ್ನು, ರಾಜಕಾರಣಿಗಳೇ ನಿಮ್ಮ ದುರಾಸೆಗಾಗಿ ನಾಗರಿಕರ ಬದುಕನ್ನೇ ಹಾಳು ಮಾಡಬೇಡಿ, ಬೇಡವೇ ಬೇಡ ಪ್ಲೈಓವರ್, ಜನನಾಯಕರೇ ಗಂಟು ಮಾಡುವುದನ್ನು ನಿಲ್ಲಿಸಿ ಜನರನ್ನು ಉಳಿಸಿ ಎಂಬ ನಾಮಫಲಕಗಳನ್ನು ಹಿಡಿದು ಮೌನ ಪ್ರತಿಭಟನೆ ಮಾಡಿದರು.
Kshetra Samachara
01/11/2021 01:59 pm