ಹುಬ್ಬಳ್ಳಿ: ಬೈಕ್ ಅಪಘಾತದಲ್ಲಿ ಮೃತಪಟ್ಟ ಖಾಸಗಿ ಸುದ್ದಿ ವಾಹಿನಿಯ ಕ್ಯಾಮರಾಮೆನ್ ಸುನಿಲ ಗೋಪಾಲ ಪಾಚಂಗಿ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ 5 ಲಕ್ಷ ರೂ. ಪರಿಹಾರ ಧನದ ಚೆಕ್ ವಿತರಿಸಿದರು.
ಸುನೀಲ ಪಾಚಂಗೆ ಒಂದೂವರೆ ವರ್ಷದ ಹಿಂದೆ ಇಲ್ಲಿನ ಚಟ್ನಿ ಕಾಂಪ್ಲೆಕ್ಸ್ ಬಳಿ ಬೈಕ್ ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಇವರ ನಿಧನದ ಹಿನ್ನೆಲೆ ಆಗಿನ ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಧನ ನೀಡುವ ಭರವಸೆ ನೀಡಿದರು. ಅದರಂತೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಮೃತನ ತಾಯಿ ಉಮಾ ಪಾಚಂಗೆ ಅವರಿಗೆ ಪರಿಹಾರ ಧನದ ಚೆಕ್ ನ್ನು ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಹುಬ್ಬಳ್ಳಿ ನಗರ ತಹಶಿಲ್ದಾರರ ಶಶಿಧರ ಮಾಡ್ಯಾಳ,ಕಂದಾಯ ನಿರೀಕ್ಷಕ ರವಿ ಎಸ್ ಬೆನ್ನೂರು, ಹಳೆ ಹುಬ್ಬಳ್ಳಿ ಗ್ರಾಮ ಲೆಕ್ಕಾಧಿಕಾರಿ ವಿಜಯ ಕುಮಾರ ಬಿ ಎಸ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ಪತ್ರಕರ್ತ ಸುರೇಶ ನಾಯಕ, ರೋಹನ್ ಹುನಸವಾಡಕರ ಇದ್ದರು.
Kshetra Samachara
28/10/2021 09:09 pm