ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸರ್ಕಾರ ಸಿದ್ದಿ ಸಮುದಾಯದ ಜನರ ಬೇಡಿಕೆ ಈಡೇರಿಸಬೇಕು! ಎಂಎಲ್‌ಸಿ ಶಾಂತರಾಮ ಸಿದ್ದಿ

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸಮುದಾಯ ಹಿಂದುಳಿದ ಸಮಾಜವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಿದ್ದಿ ಸಮುದಾಯದ ಮುಖಂಡ ಉತ್ತರ ಕನ್ನಡ ಎಂಎಲ್‌ಸಿ ಶಾಂತರಾಮ ಬುದ್ನಾ ಸಿದ್ದಿ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದಿ ಸಮಾಜದ ಸಮುದಾಯವು ಧಾರವಾಡ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಸಿಸುತ್ತಿದೆ. ಸುಮಾರು 30 ಸಾವಿರ ಜನಸಂಖ್ಯೆ ಹೊಂದಿದ್ದು, ಗುಡ್ಡಗಾಡು ಪ್ರದೇಶಗಳಲ್ಲಿ ಜೀವನ ಸಾಗಿಸುತ್ತಿದ್ದರೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.

ಮುಖ್ಯವಾಗಿ ಸುಮಾರು 50 ವರ್ಷಗಳಿಂದ ಅರಣ್ಯದಲ್ಲಿ ಅತಿಕ್ರಮಣ ಮಾಡಿ ಜಮೀನಿನಲ್ಲಿ ಬೇಸಾಯ ಮಾಡುತ್ತಾ ಬಂದಿದ್ದಾರೆ. ಆದರೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರ ಕೊಡಬೇಕೆಂದು 2006ರಲ್ಲಿ ಕಾನೂನು ಜಾರಿಗೊಳಿಸಲಾಗಿತ್ತು. ಆದರೆ ಪ್ರಸ್ತುತವಾಗಿ ಶೇಕಡಾ 30 ರಷ್ಟು ಮಾತ್ರ ಹಕ್ಕು ಪತ್ರ ನೀಡಲಾಗಿದೆ. ಇದರಿಂದಾಗಿ ಹಕ್ಕು ಪತ್ರ ಕೊಡದೆ ಇರುವುದರಿಂದ ಅನೇಕ ಸಮಸ್ಯೆಗಳನ್ನು ಸಿದ್ದಿ ಸಮುದಾಯದವರು ಎದುರಿಸುತ್ತಿದ್ದಾರೆ ಎಂದರು.

ಹಕ್ಕುಪತ್ರ ನೀಡುವಲ್ಲಿ ವಿಳಂಬವಾಗಿದೆ. ಅಲ್ಲದೇ ಕೆಲವರಿಗೆ ಹಕ್ಕುಪತ್ರ ನೀಡಿದರು ಸಂಪೂರ್ಣವಾಗಿ ನೀಡಿಲ್ಲ. ಇದರಿಂದಾಗಿ ಕೊಟ್ಟಂತಹ ಹಕ್ಕು ಪತ್ರಗಳಲ್ಲಿ ವಾಸಕ್ಕಾಗಿ ಮಾತ್ರ ಅವಕಾಶ ನೀಡಿದರೇ ಕೃಷಿ ಮಾಡೋಕೆ ಹಾಗೂ ಕೃಷಿ ಲೋನ್ ತೆಗೆದುಕೊಳ್ಳಲು ತೊಂದರೆಯಾಗುತ್ತಿದೆ ಎಂದು ತಮ್ಮ ಸಮಸ್ಯೆ ತೋಡಿಕೊಂಡರು.

ಆದ್ದರಿಂದ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರವನ್ನು ಪೂರ್ಣ ಪ್ರಮಾಣದಲ್ಲಿ ನೀಡಬೇಕು, ಸ್ವಂತ ಉದ್ಯೋಗಕ್ಕೆ ಅವಕಾಶ ಹಾಗೂ ತರಬೇತಿ ನೀಡಬೇಕು, ಜಿಲ್ಲಾ ಕೇಂದ್ರದಲ್ಲಿ ಸಿದ್ದಿ ಸಮುದಾಯದ ಮಕ್ಕಳಿಗೆ ಕ್ರೀಡಾಶಾಲೆ ತೆರೆಯಬೇಕು. ಶಿಕ್ಷಣಗೋಸ್ಕರ ಮೊರಾರ್ಜಿ ದೇಸಾಯಿ ಮಾದರಿಯಲ್ಲಿ ಶಾಲೆ ತೆರೆಯಬೇಕು, ದೊಡ್ಡ ಸಮುದಾಯ ಭವನ ನಿರ್ಮಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

Edited By : Shivu K
Kshetra Samachara

Kshetra Samachara

20/10/2021 11:44 am

Cinque Terre

20.28 K

Cinque Terre

0

ಸಂಬಂಧಿತ ಸುದ್ದಿ