ಕುಂದಗೋಳ : ಇತ್ತಿಚಿನ ದಿನಗಳಲ್ಲಿ ಲವ್ ಜಿಹಾದ್, ಮತಾಂತರದಂತಹ ಘಟನೆಗಳು ಹೆಚ್ಚಾಗುತ್ತಿವೆ. ಈ ತರಹದ ಘಟನೆಗಳಿಗೆ ಕಡಿವಾಣ ಹಾಕಬೇಕೆಂದರೆ ವಿಶ್ವಹಿಂದೂ ಪರಿಷತ್ , ಬಜರಂಗದಳ ಸ್ಥಾಪನೆ ಮುಖ್ಯವಾದ ಕೆಲಸವಾಗಿದೆ ಎಂದು ಸಂಘದ ಕಾರ್ಯದರ್ಶಿ ವಿನಾಯಕ ತಲೆಗೇರಿ ಹೇಳಿದರು.
ಅವರು ಕುಂದಗೋಳ ಪಟ್ಟಣದ ಕಲ್ಯಾಣಪುರ ಬಸವಣ್ಣನವರ ಮಠದಲ್ಲಿ ಆಯೋಜಿಸಿದ್ದ ವಿಶ್ವಹಿಂದೂ ಪರಿಷತ್ ಬಜರಂಗದಳದ ಕುಂದಗೋಳ ತಾಲೂಕ ಪ್ರಖಂಡ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಆರಂಭಿಸಿ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಬಳಿಕ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಎಸ್.ಎಚ್.ಪಾಟೀಲ್ ಸರ್ವ ಕುಂದಗೋಳ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ಸದಸ್ಯರಿಗೆ ಜವಾಬ್ದಾರಿಯನ್ನು ಘೋಷಣೆ ಮಾಡಿ ಪ್ರಮಾಣ ವಚನ ಸ್ವೀಕಾರ ಘಟ್ಟ ನಡೆಸಿಕೊಟ್ಟರು.
ಜವಾಬ್ದಾರಿ ಪಡೆದ ಸದಸ್ಯರು ಘೋಷವಾಕ್ಯ ಕೂಗಿ ಹಿಂದು ಪರಿಷತ್ ಹಾಗೂ ಬಜರಂಗದಳ ಸೇರಿ ಪ್ರಸಕ್ತ ವಿದ್ಯಮಾನದ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರವಿಕುಮಾರ್ ಪಟ್ಟಣಶೆಟ್ಟಿ, ಬಸವರಾಜ ಕೌಜಲಗಿ, ಗುರವಗೌಡ ಪಾಟೀಲ, ಸೇರಿದಂತೆ ಸರ್ವ ಸದಸ್ಯರು ಹಾಗೂ ಯುವಕರು ಉಪಸ್ಥಿತರಿದ್ದರು.
Kshetra Samachara
18/10/2021 03:09 pm