ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕುಡಿಯುವ ನೀರಿಗೆ ಮೀಟರ್ ಅಳವಡಿಕೆ ವಿರೋಧಿಸಿ ಪ್ರತಿಭಟನೆ

ಕಲಘಟಗಿ: ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಮೀಟರ್ ಅಳವಡಿಕೆ ಕೈಬಿಡಬೇಕು ಎಂದು ಒತ್ತಾಯಿಸಿ ತಾಲೂಕಿನ ಕುರುವಿನಕೊಪ್ಪ ಗ್ರಾಮ ಪಂಚಾಯಿತಿ ಎದುರು ರೈತ ಕೃಷಿ ಕಾರ್ಮಿಕರ ಸಂಘಟನೆ (ಆರ್ ಕೆ ಎಸ್) ಕಲಘಟಗಿ ತಾಲೂಕಾ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು.

ನೀರು ಮಾರಾಟದ ವಸ್ತು ಅಲ್ಲ,ನೀರು ಮೂಲಭೂತ ಹಕ್ಕು ಎಂದು ಆಗ್ರಹಿಸಿ ಗ್ರಾಮದಲ್ಲಿ ಸಂಚರಿಸಿ ಪ್ರತಿಭಟನೆ ಮಾಡಲಾಯಿತು.

ನಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ಕಲಘಟಗಿ ತಾಲೂಕ ಉಪಾಧ್ಯಕ್ಷ ಈಶ್ವರ್ ನಾಡಿಗೇರ,ಪುಂಡಲಿಕಪ್ಪ ರೇವಡಿಹಾಳ,ತಾಲೂಕ ಸಮಿತಿ ಸದಸ್ಯರಾದ ಮಹಾವೀರ ದುಳಿಕೊಪ್ಪ,ಸಂತೋಷ ಘೋರ್ಪಡೆ,ಗಿರೀಶ ದೇಸಾಯಿ,ಚೆನ್ನಯ್ಯ ಹಿರೇಮಠ,ಜಿಲ್ಲಾ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ ಜಡಗಣ್ಣನವರ,ಜಿಲ್ಲಾ ಕಾರ್ಯದರ್ಶಿ ಶರಣು ಗೊನ್ವಾರ ಇದ್ದರು.

Edited By : Nagesh Gaonkar
Kshetra Samachara

Kshetra Samachara

16/10/2021 02:44 pm

Cinque Terre

17.87 K

Cinque Terre

10

ಸಂಬಂಧಿತ ಸುದ್ದಿ