ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉಪಚುನಾವಣೆಯಲ್ಲಿ‌ ಗೆಲವು ನಮ್ಮದೆ: ಮುನೇನಕೊಪ್ಪ

ಹುಬ್ಬಳ್ಳಿ: ಉಪಚುನಾವಣೆ ನಡೆಯುತ್ತಿರವ ಸಿದಂಗಿ ಮತ್ತು ಹಾನಗಲ್ ನಲ್ಲಿ ಬಹುಮತದಿಂದ ಗೆಲ್ಲುತ್ತೆವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಉತ್ತಮವಾದ ನಾಯಕತ್ವದಲ್ಲಿ ಸರ್ಕಾರ ನಡೆಸಲಾಗುತ್ತಿದೆ. ಮಾಜಿ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪ ಮತ್ತು ಜಗದೀಶ ಶೆಟ್ಟರ ಪ್ರಚಾರದಲ್ಲಿ ಭಾಗಿಯಾಗಿದ್ದಕ್ಕೆ ಶಕ್ತಿ ಹೆಚ್ಚಿಸಿದಂತಾಗಿದೆ ಎಂದರು.

ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ವಿಚಾರವಾಗಿ ಗೇಜೆಟ್ ಆಗಿದೆ ತಕ್ಷಣ ಮಾಡಲಾಗುವುದು ಎಂದು ತಿಳಿಸಿದರು. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಯವರು ವೈಯಕ್ತಿಕ ಟೀಕೆ ರಾಜ್ಯದಿಂದ ಜನತೆ ನೋಡುತ್ತಿದ್ದಾರೆ. ಎರಡು ಪಕ್ಷದವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಜನರು ಸಹ ಪ್ರಜ್ಞಾವಂತರಿದ್ದು ಸರಿಯಾದ ಉತ್ತರ ನೀಡುತ್ತಾರೆ ಎಂದರು.

Edited By : Manjunath H D
Kshetra Samachara

Kshetra Samachara

15/10/2021 02:32 pm

Cinque Terre

47.69 K

Cinque Terre

5

ಸಂಬಂಧಿತ ಸುದ್ದಿ