ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬೇಟಿ

ಅಣ್ಣಿಗೇರಿ : ಪಟ್ಟಣದಲ್ಲಿ ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಬುಧವಾರ ಬೇಟಿ ನೀಡಿದರು. ಪಟ್ಟಣದಲ್ಲಿ ಮಳೆಯ ರಭಸಕ್ಕೆ ನೆಲಸಮಗೊಂಡ ಮನೆಗಳ ಕುಟುಂಬಕ್ಕೆ ಬೇಟಿ ನೀಡಿದರು. ಮನೆ ಕುಸಿದು ಬಿದ್ದು ಎತ್ತು ಮೃತಪಟ್ಟ ಶಿವಪ್ಪ ಹಾದಿಮನಿ ರೈತನಿಗೆ ರೂ.25 ಸಾವಿರ ಪರಿಹಾರ ಧನದ ಚೆಕ್ ನೀಡಿದರು. ಮಳೆಯ ಆರ್ಭಟಕ್ಕೆ ಸಿಕ್ಕು ಮೃತಪಟ್ಟ ಕುರಿಗಳ ಮಾಲೀಕನಿಗೆ 6 ಸಾವಿರ ಮೊತ್ತದ ಪರಿಹಾರದ ಚೆಕ್ ವಿತರಣೆ ಮಾಡಿದರು.

ನಂತರ ಸ್ಥಳೀಯ ಪುರಸಭೆ ಹತ್ತಿರದ ವಾಣಿಜ್ಯ ಮಳಿಗೆಯಲ್ಲಿ ಮಳೆ ನೀರು ಸಂಗ್ರಹಣೆಗೊಂಡು ಅಪಾರ ಪ್ರಮಾಣದಲ್ಲಿ ಹಾಳಾದ ಸಾಮಾಗ್ರಿಗಳನ್ನು ವೀಕ್ಷಣೆ ಮಾಡಿದರು.ಪಟ್ಟಣದ ಒಳಗಡೆ ಬರಲಿರುವ ಮಳೆ ನೀರನ್ನು ಬೇರೆ ಕಡೆ ಹರಿಯುವಂತೆ ಮಾಡಲು ಶೀಘ್ರದಲ್ಲೇ ವ್ಯವಸ್ಥೆ ಮಾಡುವಂತೆ ಜಿಲ್ಲಾ ಯೋಜನಾಧಿಕಾರಿ ರುದ್ರೇಶ ಅವರಿಗೆ ಸೂಚನೆ ನೀಡಿದರು. ಪಟ್ಟಣದ ವಿವಿಧ ಕಡೆ ಹಾನಿಗೊಳಗಾದ ಕುಟುಂಬಗಳ ಸರ್ವೆ ಮಾಡಿ ಆದಷ್ಟು ಬೇಗನೆ ವರದಿ ನೀಡುವಂತೆ ತಹಶೀಲ್ದಾರ ಮಂಜುನಾಥ ಅಮಾಸಿ ಹಾಗೂ ಮುಖ್ಯಾಧಿಕಾರಿ ಕೆ.ಎಫ್‌.ಕಟಗಿ ಅವರಿಗೆ ಖಡಕ್ ಎಚ್ಚರಿಕೆ ನೀಡಿದರು. ಹಾನಿಗೊಳಗಾದ ಕುಟುಂಬಗಳಿಗೆ ಆದಷ್ಟು ಬೇಗನೆ ಸರ್ಕಾರದಿಂದ ಪರಿಹಾರವನ್ನು ನೀಡಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

13/10/2021 10:12 pm

Cinque Terre

22.22 K

Cinque Terre

0

ಸಂಬಂಧಿತ ಸುದ್ದಿ