ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಅರಣ್ಯ ರಕ್ಷಕ

ಧಾರವಾಡ: ಚಾರ್ಜ್‌ಶೀಟ್‌ನಲ್ಲಿ ಹೆಸರು ಸೇರಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟು ಲಂಚ ಪಡೆಯುತ್ತಿದ್ದಾಗ ಅರಣ್ಯ ರಕ್ಷಕರೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ. ರಘು ಕುರಿ ಎಂಬ ಅರಣ್ಯ ರಕ್ಷಕ ಎಸಿಬಿಗೆ ಅಧಿಕಾರಿಗಳಿಗೆ ಸಿಕ್ಕಿಬಿದ್ದವರು.

ರುದ್ರಪ್ಪ ಶೀಗಿಹಳ್ಳಿ ಎಂಬುವರಿಂದ ರಘು 60 ಸಾವಿರ ರೂಪಾಯಿ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೊನ್ನಾಪುರ ಗ್ರಾಮದ ರುದ್ರಪ್ಪ ಶೀಗಿಹಳ್ಳಿ ಎಂಬಾತ ಕಟ್ಟಿಗೆ ಕಳ್ಳತನದಲ್ಲಿ ಸಿಕ್ಕಿಬಿದ್ದಿದ್ದ. ಈ ಪ್ರಕರಣದಲ್ಲಿ ರುದ್ರಪ್ಪನ ಅಳಿಯನ ಹೆಸರು ಸೇರಿಸುವುದಾಗಿ ರಘು ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ. ಈ ಬಗ್ಗೆ ಹೆಸರು ಸೇರಿಸದಿರಲು 80 ಸಾವಿರ ರೂಪಾಯಿಗೆ ಬೇಡಿಕೆಯಿಟ್ಟು ಅದರಲ್ಲಿ 60 ಸಾವಿರ ರೂಪಾಯಿ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಳ್ನಾವರ ರಸ್ತೆಯ ಟೋಲ್‌ ಬಳಿ ಅರಣ್ಯ ರಕ್ಷಕ ರಘು ಎಸಿಬಿಗೆ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಡಿವೈಎಸ್​ಪಿ ವೇಣುಗೋಪಾಲ‌ ನೇತೃತ್ವದಲ್ಲಿ ದಾಳಿ ನಡೆದಿದೆ.

Edited By : Nagaraj Tulugeri
Kshetra Samachara

Kshetra Samachara

13/10/2021 08:20 am

Cinque Terre

20.37 K

Cinque Terre

3

ಸಂಬಂಧಿತ ಸುದ್ದಿ