ಹುಬ್ಬಳ್ಳಿ- ಯಾದಗಿರಿ ಜಿಲ್ಲೆ ಸುರುಪೂರ ತಾಲ್ಲೂಕಿನ ಚೌಡೇಶ್ವರಿಹಾಳ ಗ್ರಾಮದಲ್ಲಿನ ದಲಿತ ಮಹಿಳೆ ಮೇಲಿನ ಅತ್ಯಾಚಾರಕ್ಕೆ ಪ್ರತಿರೋಧಿಸಿದಾಗ ಪೆಟ್ರೋಲ್ ಸುರಿದು, ಸುಟ್ಟು ಹಾಕಿದ್ದನ್ನು ಖಂಡಿಸಿ ಜೈ ಭೀಮ ಯುವ ಶಕ್ತಿ ಸೇನಾ ವತಿಯಿಂದ ನಗರದ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ಮಾಡಿ, ತಹಶೀಲ್ದಾರರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷರು ಹರೀಶ ಎಮ್ ಗುಂಟ್ರಾಳ, ಸುನಿಲ ಕುರ್ಡೇಕರ್, ವಿಜಯ ಮಾದರ್, ರಮೇಶ ಹಿರೇಮನಿ, ಗೌತಮ್ ಛಲವಾದಿ, ಮುಜಾಫರ್ ಬಹಾದುರ್, ವಿನಾಯಕ ಅಭಿಬ್, ಗುರುನಾಥ ಮೊರಬದ್, ವಿಜಯ್ ಕಟಗಿ, ಶರೀಫ್ ನದಾಫ್, ವಿಜಯ ಕರ್ರಾ, ಮೈಬೂಬ್ ಸಾಬ್ ಹೆಬ್ಬಳ್ಳಿ, ರಿಯಾಜ್ ಸಂಮೈ ಫಿರೋಜ್ಖಾನ್ ಅವಲ್ದಾರ್, ಸುನಿಲ ಫೇನಗೊಂಡ್ಡ, ಅಶೋಕ್ ಜುಮಲಾಪುರ್, ಅಪ್ಪು ಚಳಗೇರಿ, ಆನಂದ ಒಂಟೂರ್, ಶಂಕರ್ ಕಟ್ಟಿಮನಿ, ಶಿವು ಬಿಸನಳ್ಳಿ, ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.
Kshetra Samachara
08/10/2021 04:04 pm