ಕಲಘಟಗಿ: ರಾಜಕೀಯ ಜೀವನದ ಏಳಿಗೆಯಲಿ ಪ್ರತಿಯೊಬ್ಬ ಶಿಕ್ಷಕರ ಪಾತ್ರವಿದೆ,ಆದ್ದರಿಂದ ನನ್ನ ಸೇವೆ ಏನೇ ಇದ್ದರು ಅದು ಶಿಕ್ಷಕರಿಗೆ ಮೀಸಲು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನುಡಿದರು.
ಅವರು ಪಟ್ಟಣದ ಜಿ.ಇ ಕಾಲೇಜಿನಲ್ಲಿ ವಿವಿಧ ಶಿಕ್ಷಕರ ಸಂಘಗಳ ಸಂಯಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ,ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ,ಸುದೀರ್ಘ 42 ವರ್ಷಗಳಿಂದ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ಬೆಳದು ಬಂದಿದ್ದೇನೆ ಎಂದು ಹೋರಾಟದ ದಿನಗಳನ್ನು ನೆನೆದು,ಶಿಕ್ಷಕರ ಋಣ ತೀರಿಸುವುದೇ ಜೀವನದ ಗುರಿ ಎಂದರು.ನಂತರ ಹೊರಟ್ಟಿ ಅವರನ್ನು ತಾಲೂಕಿನ ಶಿಕ್ಷಕ ವೃಂದ ದವರು ಸನ್ಮಾನಿಸಿ ಗೌರವಿಸಿದರು.ಸಂಸ್ಥೆಯ ಅಧ್ಯಕ್ಷ ಡಾ ಹೆಚ್ ಬಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ,ಡಾ ಶಂಬು ಹೆಗಡಾಳ,ಜಿ ಆರ್ ಭಟ್,ಶ್ಯಾಮ ಮಲ್ಲನಗೌಡರ,ಎ ವಿ ಜಯರಾಮನವರ,ವಿ ಎನ್ ಹುದ್ದಾರ,ಎನ್ ಎನ್ ಸವಣೂರ,ವಸಂತ ಹೊರಟ್ಟಿ,ಎಫ್ ವ್ಹಿ ಮಂಜಣ್ಣವರ,ಬಿ ಜಿ ಬಶೆಟ್ಟಿ,ಕುಮಾರ ಕೆ ಎಫ್,ಆರ್ ಎಮ್ ಹೂಲ್ತಿಕೊಟ್ಟಿ,ಎಸ್ ಆರ್ ರಾಚಣ್ಣವರ,ಐ ವಿ ಜವಳಿ,ಕೆ.ಐ.ಕೋಂಗಿ,ಪ್ರಕಾಶ ಕುಂಬಾರ,ಸಿ ಎಂ ಹಂಚಿನಮನಿ
ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
Kshetra Samachara
06/10/2021 10:19 pm