ಕಲಘಟಗಿ: ಮಹಾತ್ಮ ಗಾಂಧೀಜಿ ಅವರ ಆಶಯಗಳಿಗೆ ಮನ್ನಣೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಲಘಟಗಿ ಕ್ಷೇತ್ರದ ಶಾಸಕ ಸಿ ಎಂ ನಿಂಬಣ್ಣವರಗೆ ಗ್ರಾಮೀಣ ಕೂಲಿಕಾರ್ಮಿಕ ಸಂಘಟನೆಯಿಂದ ಮನವಿ ನೀಡಲಾಯಿತು.
ಮಹಾತ್ಮ ಗಾಂಧೀಜಿ ಅವರ ೧೫೨ ನೇ ಜಯಂತಿ ನಿಮಿತ್ತ ಶಾಸಕ ಸಿ ಎಂ ನಿಂಬಣ್ಣವರ ಕಾರ್ಯಲಯಕ್ಕೆ ಭೇಟಿ ಮಾಡಿದ ಸಂಘಟನೆಯ ಸದಸ್ಯರು,ಮನವಿ ನೀಡಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಗಾಂಧೀಜಿ ಆಶಯಗಳಂತೆ ಯಾವುದು ನಡೆಯುತ್ತಿಲ್ಲ,ಅವರ ಆಶಯಗಳಿಗೆ ಮನ್ನಣೆ ಸಿಗುವಂತಾಗ ಬೇಕು ಹಾಗೂ ಗಾಂಧೀಜಿ ಆಶಯಗಳಂತೆ ಕೂಲಿಕಾರ್ಮಿಕರ ಬೇಡಿಕೆಗಳು ಈಡೇರಿಸ ಬೇಕು ಹಾಗೂ ಮದ್ಯ ಮಾರಾಟ ನಿಲ್ಲಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು. ಕೂಲಿಕಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಶ್ರಮಿಸುವ ಭರವಸೆಯನ್ನು ಶಾಸಕರು ನೀಡಿದರು.
ತಹಶಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.ಈ ಸಂಲದರ್ಭದಲ್ಲಿ ನಿಂಗಮ್ಮ ಸವಣೂರ,ಪಕ್ಕಿರೇಶ ಜಿನ್ನೂರ,ರವಿ ಜಿನ್ನೂರ,ವಿಠಲ ಧಳವಿ,ಸಾವಕ್ಕಾ ಯಂಕೋಜಿ ಪ ಹಾಗೂ ಕೂಲಿಕಾರ್ಮಿಕರು ಉಪಸ್ಥಿತರಿದ್ದರು.
Kshetra Samachara
03/10/2021 02:46 pm