ಧಾರವಾಡ: ಧಾರವಾಡದ ಸೂಪರ್ ಮಾರುಕಟ್ಟೆಯಲ್ಲಿ ತೆರವುಗೊಳಿಸಲಾದ ಅಂಗಡಿಗಳನ್ನು 15 ದಿನಗಳ ಒಳಗಾಗಿ ಮರು ಸ್ಥಾಪನೆ ಮಾಡದೇ ಹೋದರೆ ಉಗ್ರ ರೀತಿಯ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಎಚ್ಚರಿಕೆ ನೀಡಿದ್ದಾರೆ.
ಧಾರವಾಡದ ಸೂಪರ್ ಮಾರುಕಟ್ಟೆಯಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಅಂಗಡಿಗಳ ತೆರವು ವಿಷಯದಲ್ಲಿ ಸ್ಥಳೀಯ ಶಾಸಕರ ಮತ್ತು ಪಾಲಿಕೆ ಅಧಿಕಾರಿಗಳ ಬೇಜಬ್ದಾರಿತನ ಕಂಡು ಬಂದಿದೆ. ತರಕಾರಿ ಮತ್ತಿತರ ಸಣ್ಣ-ಪುಟ್ಟ ವ್ಯವಹಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರ ಅಂಗಡಿಗಳನ್ನು ಕಳೆದ ಜುಲೈ 12 ರಂದು ಪಾಲಿಕೆ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಶಾಸಕ ಅರವಿಂದ ಬೆಲ್ಲದ ಅವರು ಸಣ್ಣ ವ್ಯಾಪಾರಸ್ಥರ ಗೋಳು ಕೇಳುವ ಮನಸ್ಸು ಮಾಡುತ್ತಿಲ್ಲ. ಈ ಬಗ್ಗೆ ಆಸಕ್ತಿ ತೋರಿಸದ ಶಾಸಕ ಅರವಿಂದ ಬೆಲ್ಲದ ಅವರಿಗೆ ಬಡ ಜನರ ಶಾಪ ಖಂಡಿತ ತಟ್ಟಲಿದೆ ಎಂದು ತಮಟಗಾರ ಹೇಳಿದರು
ಈಗ ನೆಲಸಮಗೊಳಿಸಿರುವ ಅಂಗಡಿಗಳ ಜಾಗೆಯಲ್ಲಿ ಮಹಾನಗರ ಪಾಲಿಕೆಯವರು ಅಂಗಡಿಗಳ ನಿರ್ಮಾಣ ಕಾಮಗಾರಿಯನ್ನು 15 ದಿನದೊಳಗೆ ಆರಂಭಿಸಬೇಕು. ಇಲ್ಲದಿದ್ದರೆ ವ್ಯಾಪಾರಸ್ಥರೇ ತಮ್ಮ ಅಂಗಡಿಗಳನ್ನು ನಿರ್ಮಿಸಿಕೊಳ್ಳಲಿದ್ದಾರೆ. ಆಗ ಪಾಲಿಕೆಯವರು ತಡೆಯಲು ಯತ್ನಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ತಮಟಗಾರ ಎಚ್ಚರಿಸಿದರು.
ಪಾಲಿಕೆ ಸದಸ್ಯ ಶಂಭುಗೌಡ ಸಾಲಮನಿ, ಕಾಂಗ್ರೆಸ್ ಮುಖಂಡ ಪರಮೇಶ್ವರ ಕಾಳೆ, ಜಾವೇದ್ ಟಿನ್‌ವಾಲೆ ಮತ್ತಿತರರು ಈ ಸಂದರ್ಭದಲ್ಲಿದ್ದರು.
Kshetra Samachara
02/10/2021 07:30 pm