ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷ್ಮೇಶ್ವರ: ಸದಾಶಿವ ಆಯೋಗದ ವರದಿಯನ್ನು ಕೈ ಬಿಡಿ: ಬಂಜಾರ ಸಮಾಜದ ಕೂಗು...!

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು ಎಂದು ಬಂಜಾರ ಸಮಾಜದವರು ಸೋಮೇಶ್ವರ ತೇರಿನ ಮನೆಯಿಂದ ಬಜಾರ ರೋಡ ಮಾರ್ಗವಾಗಿ ಶಿಗ್ಲಿ ನಾಕಾ ದಾಟಿ ಬಸ್ ನಿಲ್ದಾಣ ಹತ್ತಿರ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ನಂತರ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಗೋರಸೇನಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ಭಾರತ ಸಂವಿಧಾನದ ಮೂಲ ಆಶಯವಾಗಿರುವ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಸಂರಕ್ಷಣೆಗಾಗಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಶ್ರಮಿಸುತ್ತಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಸೇರಿದಂತೆ ಸಮಸ್ತ ಸಮುದಾಯಗಳ ಐಕ್ಯತೆಗಾಗಿ ನಮ್ಮ ಒಕ್ಕೂಟ ನಿರಂತರವಾಗಿ ಕಾರ್ಯ ಚಟುವಟಿಕೆಗಳನ್ನು ರೂಪಿಸುತ್ತಾ ಬರುತ್ತಿದೆ ಇತ್ತೀಚಿಗೆ ಪರಿಶಿಷ್ಟ ಜಾತಿಗಳ ಮಧ್ಯೆ ಮನಸ್ಥಾಪಗಳನ್ನು ಬಿತ್ತಿ ಹಾಗೂ ದಾರ್ಶನಿಕರು ಮತ್ತು ಸಮುದಾಯದ ನಾಯಕರನ್ನು ಅವಹೇಳನ ಮಾಡುವ ಹೀನ ಕೆಲಸಗಳನ್ನು ಕೆಲ ದುರುದ್ದೇಶಿತರು ಮಾಡುತ್ತಿದ್ದಾರೆ ಅಂಥವರನ್ನು ಕೊಡಲೇ ಬಂಧಿಸಬೇಕು ಎಂದು ಹೇಳಿದರು.

ಬಂಜಾರ ಸಮಾಜದ ಯುವ ಮುಖಂಡ ಚಂದ್ರು ಚವ್ಹಾಣ ಮಾತನಾಡಿ.‌ತಲತಲಾಂತರಗಳಿಂದ ನಮ್ಮ ಭೋವಿ‌ ಬಂಜಾರ ಕೊರಮ ಕೊರಚ ಇತ್ಯಾದಿ ಅಲೆಮಾರಿ ಜಾತಿ ಸಮುದಾಯಗಳು ಕೂಡಾ ಅಸ್ಪೃಶ್ಯತೆ ತಾರತಮ್ಯ ಸುಳ್ಳು ಅಪರಾಧಿತ ಕಳಂಕ ದೌರ್ಜನ್ಯ ವಂಚನೆಗಳಿಂದ ಬಲಿಯಾಗುತ್ತಲೇ ಬಂದಿವೆ ಅಲೆಮಾರಿ ಜಾತಿಗಳನ್ನು ಒಳಗೊಂಡಂತೆ 1930 ರಲ್ಲಿಯೇ ಮೈಸೂರ ರಾಜ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಮುತುವರ್ಜಿಯಿಂದಾಗಿ ಡಿಪ್ರೆಸ್ಡ ಪಟ್ಟಿಯಲ್ಲಿ ಸೇರಿಸಿ ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಯಿತು. ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬಾರದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಪ್ರಯತ್ನದ ಫಲದಿಂದಾಗಿ ಪಡೆದ ಸಂವಿಧಾನಿಕ ಮೀಸಲಾತಿ ಸೌಲಭ್ಯಗಳನ್ನು ವಂಚಿಸಲು ಕೆಲ ರಾಜಕೀಯ ಸೂತ್ರಧಾರಿಗಳು ಹವಣಿಸುವಂತೆ ಕಾಣುತ್ತಿದೆ. ಇಂತಹ ಕುತಂತ್ರಗಳು ನಿಲ್ಲಬೇಕಾಗಿದೆ ಎಂದು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

01/10/2021 09:44 pm

Cinque Terre

100.99 K

Cinque Terre

1

ಸಂಬಂಧಿತ ಸುದ್ದಿ