ಹುಬ್ಬಳ್ಳಿ- ದೇಶದ ಪ್ರಧಾನಮಂತ್ರಿ ಸರ್ವರಿಗೆ ಸೂರು ಯೋಜನೆಗೆ ವರ್ಡ್ ಸ್ವ್ಕೇರ್ ಬೆಂಬಲವಾಗಿ ನಿಂತು ಮನೆ ನಿರ್ಮಾಣ ಮಾಡಿ, ಕಡಿಮೆ ದರದಲ್ಲಿ ಜನರಿಗೆ ಹಸ್ತಾಂತರಿಸಲು ಸಿದ್ದಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ವರ್ಡ್ ಸ್ವ್ಕೇರ್ ಮುಖ್ಯಸ್ಥ ಯೋಗಿಶ ಹಬೀಬ್ ಅವರ ನೇತೃತ್ವದಲ್ಲಿ ವರ್ಡ್ ಸ್ವ್ಕೇರ್ ಕಾನೂನು ಬದ್ದ ರೀತಿಯಲ್ಲಿ ಈಗಾಗಲೇ 250 ಮನೆಗಳನ್ನು ನಿರ್ಮಾಣ ಮಾಡಿದೆ. ಇವುಗಳನ್ನು ಡಿಸೆಂಬರ್ ಅಂತ್ಯಕ್ಕೆ ಗ್ರಾಹಕರಿಗೆ ಹಸ್ತಾಂತರ ಮಾಡುತ್ತಿದೆ. ಇಲ್ಲಿ ಸಿಂಗಲ್, ಡಬಲ್, ತ್ರಿಬಲ್ ಬೆಡ್ ರೂಮ್ ಮನೆಗಳಿವೆ. ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ ಡಿಸೈನ್ ಕೂಡಾ ಮಾಡಿರುವ ವರ್ಡ್ ಸ್ಕ್ವೇರ್, ಪ್ರಧಾನ ಮಂತ್ರಿ ವಸತಿ ಯೋಜನೆಯಲ್ಲಿ ಪ್ರತಿ ಮನೆಗೆ 2.67 ಲಕ್ಷ ಸಬ್ಸಿಡಿ ಕೂಡಾ ನೀಡುತ್ತಿದೆ. ಇದು ನನ್ನ ಕ್ಷೇತ್ರದಲ್ಲಿ ಆಗುತ್ತಿರುವುದು ಖುಷಿಯಾಗಿದೆ. ಮುಂದೆ ಕುಸುಗಲ್ ರಸ್ತೆಯಲ್ಲಿಯೂ ಪ್ರಾಜೆಕ್ಟ್ ಮಾಡುವ ಉದ್ದೇಶ ಹೊಂದಿದ್ದಾರೆ. ಇಂದು ವರ್ಡ್ ಸ್ವ್ಕೇರ್ ಸಮುಚ್ಚಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದರು.
ವರ್ಡ್ ಸ್ವ್ಕೇರ್ ಮುಖ್ಯಸ್ಥ ಯೋಗಿಶ ಹಬೀಬ್ ಮಾತನಾಡಿ, ಜನರಿಗೆ ಉತ್ತಮ ಗುಣಮಟ್ಟದ ಸೂರು ಒದಗಿಸುವ ಉದ್ದೇಶದಿಂದ ವರ್ಡ್ ಸ್ಕ್ವೇರ್ ಮನೆ ನಿರ್ಮಾಣ ಕಾರ್ಯ ಮಾಡುತ್ತಿದೆ. ಈಗಾಗಲೇ ನಿರ್ಮಿಸಿದ ಮನೆಗಳು ಬುಕಿಂಗ್ ಆಗಿದ್ದು, ಸರ್ಕಾರ ಅನುಮತಿ ನಂತರ ಮತ್ತೆ ಹೊಸ ಪ್ರಾಜೆಕ್ಟ್ ಪ್ರಾರಂಭಿಸಲಾಗುವುದು. ಇನ್ನೂ ಗ್ರಾಹಕರಿಗೆ ನಾವೇ ಸಾಲಸೌಲಭ್ಯ ಒದಗಿಸಿ ತಿಂಗಳು ಕಂತುಗಳಲ್ಲಿ ಹಣ ಕಟ್ಟುವ ಸವಲತ್ತುಗಳನ್ನು ನಾವು ನೀಡಿದ್ದೇವೆ ಎಂದರು.
ಇನ್ನು, ಇದೇ ಸಂದರ್ಭದಲ್ಲಿ ವರ್ಡ್ ಸ್ವ್ಕೇರ್ ನಿರ್ದೇಶಕ ಹರ್ಷವರ್ಧನ ಧಾರವಾಡ ಜಿಲ್ಲೆಯಲ್ಲಿ ಏಕಗವಾಕ್ಷಿ (ಸಿಂಗಲ್ ವಿಂಡೋ ಸಿಸ್ಟಮ್) ಪರಿಣಾಮಕಾರಿಯಾಗಿ ಜಾರಿಗೆಗೊಳಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕ ಜಗದೀಶ್ ಶೆಟ್ಟರ್, ಈ ಬಗ್ಗೆ ಹು-ಡಾ ಮತ್ತು ಪಾಲಿಕೆ ಆಯುಕ್ತರ ಜೊತೆಗೆ ಚರ್ಚೆ ನಡೆಸುವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿ ಹು-ಡಾ ಅಧ್ಯಕ್ಷ ನಾಗೇಶ ಕಲಬುರಗಿ, ಕಿರಣ ಹಬೀಬ್, ಹರ್ಷವರ್ಧನ, ಪ್ರೀನ್ಸ್, ಮಂಜುನಾಥ ರತನ್ ಸೇರಿದಂತೆ ಮುಂತಾದವರು ಇದ್ದರು.
Kshetra Samachara
01/10/2021 04:03 pm