ಕುಂದಗೋಳ : ಪಟ್ಟಣಕ್ಕೆ ಕೃಷಿ ಇಲಾಖೆ ಕಟ್ಟಡ ಉದ್ಘಾಟನೆ ಆಗಮಿಸಿದ ಕೃಷಿ ಸಚಿವರಿಗೆ ರೈತರು ಪ್ರಶ್ನೇಗಳ ಸುರಿಮಳೆ ಗೈದು ಮೆಣಸಿನಕಾಯಿ ಬೆಳೆಗೆ ಅಂಟಿದ ಮರಟು ರೋಗಕ್ಕೆ ಪರಿಹಾರ ಕೊಡಿ ಎಂದು ಮೆಣಸಿನಗಿಡ ಕಿತ್ತು ತಂದು ಸಚಿವರಿಗೆ ತೋರಿಸಿದ ಪ್ರಸಂಗ ಜರುಗಿತು.
ಹೌದು ! ಕಟ್ಟಡ ಉದ್ಘಾಟಿಸಿ ರೈತರ ಜೊತೆ ಸಂವಾದಕ್ಕೆ ಕುಳಿತ ಕೃಷಿ ಸಚಿವರಿಗೆ ಇಲಾಖೆ ಅಧಿಕಾರಿಗಳು ಹೊಲಕ್ಕೆ ಭೇಟಿ ನೀಡೋದಿಲ್ಲ, ಹೊಲಗಳಿಗೆ ಸಂಚರಿಸೋ ರಸ್ತೆ ಸರಿಯಿಲ್ಲಾ, ಈಗಾಗಲೇ ತೋಟಗಾರಿಕೆ ಇಲಾಖೆಯಿಂದ ಕೃಷಿಹೊಂಡ ನಿರ್ಮಿಸಿಕೊಂಡ ರೈತರಿಗೆ ಸಹಾಯಧನ ಬಂದಿಲ್ಲಾ ಬೆಳೆ ವಿಮೆ ಬಂದಿಲ್ಲಾ, ಮುಖ್ಯವಾಗಿ ಮಣ್ಣು ಪರೀಕ್ಷಾ ಕೇಂದ್ರವಿಲ್ಲ, ಹತ್ತಿಗೆ ಕೆಂಪು ರೋಗ ಸತತ ಮೂರು ವರ್ಷಗಳಿಂದ ಕಾಡುತ್ತಿದೆ ಏನಿದೆ ಪರಿಹಾರ ? ಸಾವಯವ ಕೃಷಿಗೆ ಉತ್ತೇಜನ ಎಲ್ಲಿದೆ ಎಂದು ರೈತರು ಕೃಷಿ ಸಚಿವರು ವಿರುದ್ಧ ಆಕ್ರೋಶಗೊಂಡರು.
ರೈತರು ಎಲ್ಲ ಪ್ರಶ್ನೇಗಳಿಗೆ ಸಮಾಧಾನವಾಗಿ ಉತ್ತರಿಸಿದ ಕೃಷಿ ಸಚಿವರು ಇಲಾಖೆ ಅಧಿಕಾರಿಗಳಿಗೆ ಸರಿಯಾಗಿ ಕರ್ತವ್ಯ ನಿರ್ವಹಿಸಿ ಬೆಳೆ ವಿಮೆ ಮಾಹಿತಿ ಇಲಾಖೆ ನೋಟಿಸ್ ಬೋರ್ಡ್ ಹಾಕಿ ಇಲ್ಲಿ ಮಣ್ಣು ಪರೀಕ್ಷೆ ಕೇಂದ್ರ ತೆರೆಯಲು ವಿಚಾರ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ರೈತರು ನಾವ್ ಬಡವ್ರ್ ಅಗ್ಯೇವ್ರಿ ಸರ್ಕಾರ ಏನಾದ್ರೂ ಮಾಡ್ಲೀ ಎಂದಾಗ ನೀವೂ ಕುಂದಗೋಳದವ್ರ ಮೆಣಸಿನಕಾಯಿ ಸಾಹುಕಾರ ಅದಿರಿ ನೀವೂ ಬಡವರಲ್ಲ ನಿಮ್ಮಿಂದಲೇ ಸರ್ಕಾರ ಎಂದು ಆಕ್ರೋಶಗೊಂಡ ರೈತರು ಮುಖದಲ್ಲಿ ನಗು ತರಿಸಿದರು.
Kshetra Samachara
01/10/2021 03:26 pm