ಕಲಘಟಗಿ: ತಾಲೂಕಿನ ದೇವಿಕೊಪ್ಪ ಹತ್ತಿರದ ಭಟ್ಟಿಕೊಪ್ಪ ಹತ್ತಿರ ಆನೆಗಳು ಬರದಂತೆ ತಡೆಯಲು ಆನೆ ಕಂದಕ ನಿರ್ಮಾಣ ಮಾಡುವ ಕಾಮಗಾರಿಗೆ ಶಾಸಕ ಸಿ ಎಂ ನಿಂಬಣ್ಣವರ ಭೂಮಿ ಪೂಜೆಯನ್ನು ಬುಧವಾರ ನೆರವೇರಿಸಿದರು.
ಅವರು ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿ, ದೇವಿಕೊಪ್ಪ,ಬೈಚವಾಡ,ಸೂಳಿಕಟ್ಟಿ,ದಿಂಬುವಳ್ಳಿ ಹಾಗೂ ಮಸಳಿಕಟ್ಟಿ ಗ್ರಾಮಗಳಲ್ಲಿ ಕಳೆದ ವರ್ಷಗಳಿಂದ ಆನೆ ಹಿಂಡು ಮತ್ತೆ ಮತ್ತೆ ಬರುತ್ತಿವೆ,ಆನೆಗಳು ಬರುವುದನ್ನು ತಡೆಯುವ ಸಲುವಾಗಿ 55 ಲಕ್ಷ ರೂಪಾಯಿ ವೆಚ್ಚದಲ್ಲಿ 6.5 ಕಿ.ಮೀ ಆನೆ ಕಂದಕ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು,ಆನೆ ಕಂದಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೌರಭಕುಮಾರ,ಕಲಘಟಗಿ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ,ಶಾಸಕರ ಆಪ್ತ ಸಹಾಯಕ ಮಾರುತಿ ಹಂಚಿನಮನಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
30/09/2021 07:34 am