ಹುಬ್ಬಳ್ಳಿ: ಅದು ಭಾರತೀಯ ಜನತಾ ಪಕ್ಷದ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಚುನಾವಣಾ ಕಣ. ಸಿ.ಎಂ.ಉದಾಸಿಯವರ ಅಗಲಿಕೆಯಿಂದ ತೆರವುಗೊಂಡಿದ್ದ ಸ್ಥಾನಕ್ಕೆ ಬಾರಿ ಪೈಪೋಟಿ ನಡೆದಿದೆ. ಹಾಗಿದ್ದರೇ ಯಾವುದು ಆ ಚುನಾವಣೆ...? ಅಲ್ಲಿ ನಡೆಯುತ್ತಿರುವ ಬೆಳವಣಿಗೆ ಆದರೂ ಎನು ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್...
ಉತ್ತರ ಕರ್ನಾಟಕ ಭಾಗದ ಹೆಮ್ಮೆಯ ಕುಮಾರವ್ಯಾಸರ ನಾಡು ಎಂದೇ ಖ್ಯಾತಿ ಪಡೆದ ಹಾನಗಲ್ ಉಪಚುನಾವಣೆ ದಿನಾಂಕ ಘೋಷಣೆ ಹಿನ್ನಲೆಯಲ್ಲಿ ಟಿಕೆಟ್ ಗಾಗಿ ಕೈ ಕಮಲ ಪಾಳೆಯದಲ್ಲಿ ದೊಡ್ಡ ಮಟ್ಟದ ಲಾಭಿ ಶುರುವಾಗಿದೆ. ಹೌದು.. ಸಿ.ಎಂ.ಉದಾಸಿಯವರ ನಿಧನದಿಂದ ಖಾಲಿಯಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕೈ ಕಮಲ ಪಾಳೆಯದಲ್ಲಿ ಮತ್ತೊಮ್ಮೆ ಚುನಾವಣೆ ಕಾವು ರಂಗು ಪಡೆದುಕೊಂಡಿದೆ. ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹಾಗೂ ಮಾಜಿ ಸಚಿವ ಮನೋಹರ ತಹಶಿಲ್ದಾರ ಕಸರತ್ತು ನಡೆಸಿದ್ದರೇ. ಜೆಡಿಎಸ್ ನಿಂದ ಶೇಖ್ ಅಭ್ಯರ್ಥಿ ಘೋಷಣೆಯಾಗಿದೆ. ಅಲ್ಲದೇ ಬಿಜೆಪಿಯಿಂದ ಇದುವರೆಗೂ ಅಭ್ಯರ್ಥಿಗಳ ಆಯ್ಕೆ ಮಾತ್ರ ಆಗಿಲ್ಲ ಅಂತಿದ್ದಾರೆ ಬಿಜೆಪಿ ನಾಯಕರು.
ಇನ್ನೂ ಹಾನಗಲ್ ವಿಧಾನಸಭಾ ಚುನಾವಣೆಗೆ ಕಮಲ ಪಡೆಯು ಶತಾಯು ಗತಾಯು ಹೋರಾಟ ನಡೆಸಿದ್ದು, ಈಗಾಗಲೇ ದಾವಣಗೆರೆಯಲ್ಲಿ ಕೋರ್ ಕಮಿಟಿಯಲ್ಲಿಯೂ ಕೂಡ ಸಾಕಷ್ಟು ಚರ್ಚೆಗಳನ್ನು ಮಾಡಲಾಗಿದೆ. ಆದರೆ ಅಲ್ಲಿಯೂ ಅಭ್ಯರ್ಥಿಗಳ ಪಟ್ಟಿ ಪೈನಲ್ ಆಗಿಲ್ಲ. ಆದರೆ ಲೋಕಸಭಾ ಸದಸ್ಯ ಶಿವಕುಮಾರ್ ಉದಾಶಿ ಪತ್ನಿ ರೇವತಿ ಉದಾಶಿ ಟಿಕೇಟ್ ಆಕಾಂಕ್ಷಿಯಾಗಿದ್ದು, ರೇವತಿ ಉದಾಸಿ ಕಣಕ್ಕಿಳಿಯುವುದು ಬಹುತೇಕ ಪೈನಲ್ ಆಗಿದೆ ಎಂಬುವಂತ ಮಾತು ಆಂತರಿಕ ವಲಯದಿಂದ ಕೇಳಿ ಬರುತ್ತಿವೆ. ಅಲ್ಲದೇ ಟಿಕೆಟ್ ಘೋಷಣೆ ಮಾತ್ರ ಬಾಕಿ ಉಳಿದಿದೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಕಳೆದ ಕೆಲವು ತಿಂಗಳಿಂದ ಕ್ಷೇತ್ರದಲ್ಲಿ ಶಿವಕುಮಾರ್ ಉದಾಸಿ ಬಿಡುಬಿಟ್ಟಿದ್ದಾರೆ. ಕಾಂಗ್ರೆಸ್ ನಿಂದ ಶ್ರೀನಿವಾಸ್ ಮಾನೆಗೆ ಟಿಕೆಟ್ ಸಿಗುವ ಸಾದ್ಯತೆ ದಟ್ಟವಾಗಿದೆ. ಹಾನಗಲನಲ್ಲಿ ಕೂಡ ಶ್ರೀನಿವಾಸ ಮಾನೆ ಬಿಡು ಬಿಟ್ಟಿದ್ದಾರೆ. ಕಳೆದ ಬಾರಿ ಸಿಎಂ ಉದಾಸಿ ವಿರುದ್ದ ಶ್ರೀನಿವಾಸ ಮಾನೆ ಸೋತಿದ್ದರು. ಆದ್ದರಿಂದ ಈ ಬಾರಿ ಬಿಜೆಪಿಗೆ ಪ್ರತಿಷ್ಠೆ ಪ್ರಶ್ನೆಯಾಗಿದ್ದು, ಅರ್ಹರನ್ನು ಕಣಕ್ಕೆ ಇಳಿಸಲು ಬಿಜೆಪಿ ಸಿದ್ಧತೆ ನಡೆಸಲಾಗಿದೆ.
ಒಟ್ಟಿನಲ್ಲಿ ಕಮಲ ಪಡೆಯ ಭದ್ರಕೋಟೆ ಎಂಬುವಂತ ಹಾನಗಲ್ ವಿಧಾನಸಭಾ ಚುನಾವಣೆ ಗೆಲವಿಗೆ ಬಿಜೆಪಿ ಸಾಕಷ್ಟು ಶ್ರಮವಹಿಸಿತ್ತಿದ್ದು, ಎಲ್ಲೆಡೆಯೂ ಟಿಕೆಟ್ ಆಕಾಂಕ್ಷಿತರ ಲಾಭಿ ನಡೆಯುತ್ತಿದೆ. ಈಗಾಗಲೇ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಹಾನಗಲ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು ಯಾರ ಮುಡಿಗೆ ಹೋಗುತ್ತದೇ ಎಂಬುವುದನ್ನು ಕಾದು ನೋಡಬೇಕಿದೆ.
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್...!
Kshetra Samachara
28/09/2021 06:28 pm