ಕುಂದಗೋಳ : ತಾಲೂಕಿನ ಸಂಶಿ ಗ್ರಾಮದ 4ನೇ ವಾರ್ಡಿನಲ್ಲಿ 15ನೇ ಹಣಕಾಸು ಅಂಗವಿಕಲರ ಮೀಸಲು ಅನುದಾನದಲ್ಲಿ 25ಕ್ಕೂ ಹೆಚ್ಚು ವಿಶೇಷ ಚೇತನ ಫಲಾನುಭವಿಗಳಿಗೆ ಪಂಚಾಯಿತಿ ವತಿಯಿಂದ ಕುಡಿಯುವ ನೀರು ಸಂಗ್ರಹದ ಪಾತ್ರೆಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ವಿರಕ್ತಮಠದ ಚನ್ನಬಸವದೇವರು ಪಂಚಾಯತಿಯ ಅನುದಾನ ಕಡಿಮೆ ಇದ್ದರೂ ಕೂಡಾ ಅಂಗವಿಕಲರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ರೀತಿ ಉಪಯುಕ್ತ ಸಾಮಾಗ್ರಿಗಳನ್ನು ವಿತರಣೆ ಮಾಡಿದ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಅಲ್ಲದೆ ಸಾರ್ವಜನಿಕರ ಸಹಕಾರ ಅಭಿರುದ್ದಿಯೇ ಗ್ರಾಪಂ ಸದಸ್ಯರಿಗೆ ಶ್ರೀರಕ್ಷೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷರಾದ ಶಂಕರಣ್ಣ ಬ್ಯಾಹಟ್ಟಿ, ವಾರ್ಡ್ ಸದಸ್ಯ ರೇಖಾ ಕರಷಣ್ಣವರ, ಅಲ್ತಾಪ ಮುಲ್ಲಾ, ಇರ್ಷಾದ ಮುಲ್ಲಾ ಉಪಸ್ಥಿತರಿದ್ದು ಅಲ್ಲಾಪುರ ಗ್ರಾಪಂ ಸದಸ್ಯ ಮಲ್ಕಿಕಾರ್ಜುನ ರಡ್ಡೆರಗೆ ಸನ್ಮಾನಿಸಿದರು.
Kshetra Samachara
28/09/2021 04:06 pm