ಕಲಘಟಗಿ: ಬ್ಲಾಕ್ ಕಾಂಗ್ರೆಸ್‌ನಲ್ಲಿ ಲಾಡ್ ಬಣ,ಛಬ್ಬಿ ಬಣ ಎಂಬ ಯಾವುದೇ ಎರಡು ಬಣಗಳು ಇಲ್ಲ ಇರವುದು ಕಾಂಗ್ರೆಸ್ ಬಣ ಒಂದೇ,ಲಾಡ್ ಅವರಿಗೆ ಟಿಕೆಟ್ ಸಿಕ್ಕರೇ ನಾನು ಬೆಂಬಲ ಮಾಡುತ್ತೇನೆ, ನನಗೆ ಟಿಕೆಟ್ ಸಿಕ್ಕರೆ ಅವರು ಬೆಂಬಲಿಸುತ್ತಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ್ ಛಬ್ಬಿ ಸ್ಪಷ್ಟಪಡಿಸಿದರು.
ಅವರು ತಾಲೂಕಿನ ದೇವಿಕೂಪ್ಪ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಗ್ರಾಮ ವಾಸ್ತವ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಜನರ ಕಷ್ಟ ಸುಖವನ್ನು ಕೇಳುವ ಹಾಗೂ ಪಕ್ಷದ ಸಂಘಟನೆ ಉದ್ದೇಶದಿಂದ ಗ್ರಾಮ ವಾಸ್ತವ್ಯ ಮಾಡಲಾಗುತ್ತಿದೆ.ಸಂತೋಷ ಲಾಡ್ ಅವರು ನಾನು ಉತ್ತಮ ಸ್ನೇಹಿತರಾಗಿದ್ದು,ಎಲ್ಲೇ ಸಿಕ್ಕರು ಮಾತನಾಡಿ ಕಷ್ಟ ಸುಖ ಹಂಚಿಕೊಳ್ಳತ್ತೇವೆ.ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಇವೆ ಅಷ್ಟೇ ಎಂದು ಸುದ್ದಿಗಾರರ ಪ್ರಶ್ನಗೆ ಉತ್ತರಿಸಿದರು.ಮುಂದಿನ ದಿನಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿಚಾರ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಣ್ಣಪ್ಪ ಓಲೇಕಾರ,ಕಿರಣ ಪಾಟೀಲಕುಲಕರ್ಣಿ,ಗುರುನಾಥ ದಾನವೇನವರ,ಬಿ ವಾಯ್ ಪಾಟೀಲ,ನಿಜಗುಣಿ ಕೆಲಗೇರಿ,ಸುಭಾಸ ಮುದಿಗೌಡರ,ಅನಂತಮಾಮಲೆ ದೇಶಪಾಂಡೆ,ಈರಣ್ಣ ಕಡ್ಲೆಣ್ಣವರ,ಶರಣಪ್ಪ ಮಡಿವಾಳರ,ಗುರುಸಿದ್ದ ಕೆಲಗೇರಿ,ಗುರುಸಿದ್ದ ಟೊಂಗಳೆ,ಮದನ ಕುಲಕರ್ಣಿ,ಶಂಕರ ಮುಗಳಿ ಉಪಸ್ಥಿತರಿದ್ದರು.
Kshetra Samachara
27/09/2021 10:12 pm