ನವಲಗುಂದ : ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟದ ವತಿಯಿಂದ ಇಂದು ರಾಷ್ಟ್ರೀಯ ಹೆದ್ದಾರಿ ತಡೆದು ನಡೆಸಿದ ಪ್ರತಿಭಟನೆಯಲ್ಲಿ ಪೋಲೀಸರ ಮತ್ತು ರೈತ ಹೋರಾಟಗಾರರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು.
ಹೌದು ರಾಷ್ಟ್ರೀಯ ಹೆದ್ದಾರಿ ತಡೆದ ವೇಳೆ ರಸ್ತೆಯಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾದ ಹಿನ್ನೆಲೆ ಸರ್ಕಾರಿ ಬಸ್ ಚಾಲಕ ದಾರಿ ಬಿಡುವಂತೆ ಕೇಳಿದ್ದಾನೆ. ಆದರೆ ಇದಕ್ಕೆ ಪ್ರತಿಭಟನಾಕಾರರು ಬಿಡುವುದಿಲ್ಲ ಎನ್ನುತ್ತಲೇ, ಬಸ್ ಚಾಲಕ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯತೊಡಗಿತು. ತಕ್ಷಣ ಪೊಲೀಸರು ಮಧ್ಯ ಪ್ರವೇಶ ಮಾಡಿದ್ದು, ರೈತ ಪ್ರತಿಭಟನಾಕಾರರು ಮತ್ತು ಪೋಲೀಸರ ನಡುವೆ ಕೊಂಚ ವಾಗ್ವಾದ ನಡೆದಿದೆ.
Kshetra Samachara
27/09/2021 03:51 pm