ಹುಬ್ಬಳ್ಳಿ- ಮೀಸಲಾತಿ ನೀಡುವ ವಿಚಾರ ಬಸವರಾಜ ಬೊಮ್ಮಾಯಿ ಸಂಪೂರ್ಣ ಬೆಂಬಲ ಕೊಟ್ಟಿದ್ರು, ಈಗ ಗಡುವು ಮುಗಿದಿದೆ, ಅದನ್ನ ಅವರು ಆದಷ್ಟು ಬೇಗ ನೀಡಬೇಕು. ಯಾರು ನಮ್ಮ ಸಮಾಜಕ್ಕೆ ಇರ್ತಾರೋ ಅವರಿಗೆ ನಮ್ಮ ಸಹಕಾರ ಇರುತ್ತದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಸುದ್ದಿಗೋಷ್ಠಿ ಮಾತನಾಡಿದ ಅವರು, ಸದನದಲ್ಲಿ 6 ತಿಂಗಳ ಗಡುವು ಮುಗಿದಿದೆ. ಸರಕಾರಕ್ಕೆ ಮತ್ತೆ ನಿನ್ನೆ ಯತ್ನಾಳ್ ಎಚ್ಚರಿಸಿದ್ದಾರೆ ಆದರು ಕ್ಯಾರೆ ಎನ್ನುತ್ತಿಲ್ಲ. ನಮಗೆ ಸ್ಪಷ್ಟವಾದ ಉತ್ತರ ಸರ್ಕಾರದಿಂದ ಬರಬೇಕು.
ಸಿಎಂ ಬದಲಾವಣೆ ಆದ್ರೂ ಸಹ ಅದೇ ಸರ್ಕಾರ ಇದೆ. ನಾವು ಮತ್ತೆ ಬೆಂಗಳೂರು ತಲುಪುವ ಮೊದಲೇ ಸ್ಪಷ್ಟ ಉತ್ತರ ಸಿಗಬೇಕು ಎಂದರು.
ಮೀಸಲಾತಿಗೋಸ್ಕರ ಕ್ರಾಂತಿಕಾರಿ ಹೋರಾಟಕ್ಕೆ ಸರ್ಕಾರ ಮಾಡಬಾರದು, ನಮ್ಮ ಶಾಂತಿಯುತ ಹೋರಾಟಕ್ಕೆ ಸರ್ಕಾರ ಮುಂದಾಗಬೇಕು ಎಂದರು.
Kshetra Samachara
25/09/2021 05:46 pm