ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡದಿದ್ದರೆ ಮತ್ತೆ ಧರಣಿ ಸತ್ಯಾಗ್ರಹ: ಶ್ರೀ ಜಯಮೃತ್ಯುಂಜಯ ಸ್ವಾಮಿಜಿ

ಕಲಘಟಗಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ೨ ಎ ಮೀಸಲಾತಿಗಾಗಿ ಸರ್ಕಾರಕ್ಕೆ ನೀಡಿರುವ ಗಡುವು ಮುಗಿದಿದ್ದು,೨ ಎ ಮೀಸಲಾತಿ ಘೋಷಣೆ ಮಾಡದಿದ್ದರೆ ಧರಣಿ ಸತ್ಯಾಗ್ರಹ ಆರಂಭ ಮಾಡಲಾಗುವದು ಎಂದು ಕೂಡಲಸಂಗಮ ಶ್ರೀ ಜಯಮೃತ್ಯುಂಜಯ ಮಹಾಸ್ವಾಮಿಜಿ ತಿಳಿಸಿದರು.

ಅವರು ಪಟ್ಟಣಕ್ಕೆ ಬುಧವಾರ ಭೇಟಿ ನೀಡಿ ಸೆ ೨೫ ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ೨ ಎ ಮೀಸಲಾತಿ ಜಿಲ್ಲಾ ಮಟ್ಟದ ಅಭಿಯಾನದ ಕುರಿತು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,೯೦೦ ವರ್ಷಗಳಿಂದ ಪಂಚಮಸಾಲಿ ಸಮುದಾಯ ಸಂಘಟನೆ ಕೊರತೆಯಿಂದ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಶೋಷಣೆಗೆ ಒಳಗಾಗುತ್ತಾ ಬಂದಿದೆ. ಈಗ ಸಮುದಾಯ ಒಂದಾಗಿದ್ದು ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಬೇಕು,ಮೀಸಲಾತಿ ನೀಡಲು ಮೀನಾಮಿಷ ಎಣಿಸಿದರೆ ಸಹಿಸಿಕೊಳ್ಳುವುದಿಲ್ಲ ಮತ್ತೆ ಚಳುವಳಿ ಪ್ರಾರಂಭ ಮಾಡಲಾಗುವದು ಎಂದು ಹೇಳಿದರು.

ಪಂಚಮಸಾಲಿ ಸಮುದಾಯದ ತಾಲ್ಲೂಕ ಅಧ್ಯಕ್ಷ ಸಿ. ಬಿ ಹೊನ್ನಳ್ಳಿ, ಮುಖಂಡರಾದ ಮಂಜುನಾಥ ಮುರಳ್ಳಿ,ಐ ಸಿ ಗೋಕುಲ,ಬಿ. ವೈ ಪಾಟೀಲ,ನಾಗರಾಜ ಗಂಜಿಗಟ್ಟಿ,ಬಿ. ಜಿ ಬಿರಾದಾರ,ಶಿವಪುತ್ರಪ್ಪ ಆಲದಕಟ್ಟಿ, ಬಸವರಾಜ ತಿಪ್ಪನ್ನವರ,ಗಂಗಪ್ಪ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

23/09/2021 09:34 pm

Cinque Terre

29.19 K

Cinque Terre

3

ಸಂಬಂಧಿತ ಸುದ್ದಿ