ಧಾರವಾಡ: ನವಲಗುಂದ ಕ್ಷೇತ್ರದ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಎನ್.ಎಚ್.ಕೋನರಡ್ಡಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ದೂರವಾಣಿ ಮೂಲಕ ಪಬ್ಲಿಕ್ ನೆಕ್ಸ್ಟ್ ಜೊತೆ ಸ್ವತಃ ಎನ್.ಎಚ್.ಕೋನರಡ್ಡಿ ಅವರೇ ಮಾತನಾಡಿದ್ದಾರೆ.
ನಾನು ಸದ್ಯಕ್ಕೆ ಜೆಡಿಎಸ್‌ನಲ್ಲೇ ಇದ್ದೇನೆ. ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ. ಪತ್ರಿಕೆಯವರೊಬ್ಬರು ಆ ರೀತಿ ಉಲ್ಲೇಖ ಮಾಡಿ ಬರೆದಿದ್ದಾರೆ. ತಂದೆಯ ಸಮಾನರಾದ ದೇವೇಗೌಡರಿದ್ದಾರೆ, ಕುಮಾರಸ್ವಾಮಿ ಅವರಿದ್ದಾರೆ ನನ್ನ ರಾಜಕೀಯ ನಡೆ ಬಗ್ಗೆ ನಾನು ಅವರೊಂದಿಗೆ ಚರ್ಚೆ ಮಾಡುತ್ತೇನೆ. ನನ್ನ ಕ್ಷೇತ್ರದ ಜನರಿದ್ದಾರೆ ಅವರೊಂದಿಗೂ ಚರ್ಚೆ ಮಾಡಬೇಕಿದೆ. ಪಕ್ಷದಲ್ಲಿನ ನನ್ನ ಹುದ್ದೆಗೆ ಮಾತ್ರ ನಾನು ರಾಜೀನಾಮೆ ಕೊಟ್ಟಿದ್ದೇನೆ. ಪಕ್ಷದಲ್ಲಿ ನಾನು ಸಾಮಾನ್ಯ ಕಾರ್ಯರ್ತನಾಗಿ ಇರುತ್ತೇನೆ ಎಂಬುದನ್ನು ನಾನು ತಿಳಿಸಿದ್ದೇನೆ. ಸದ್ಯಕ್ಕೆ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ ಎಂದಿದ್ದಾರೆ.
Kshetra Samachara
18/09/2021 10:34 pm