ಹುಬ್ಬಳ್ಳಿ: ಅದು ಸುಮಾರು ಎಪ್ಪತ್ತು ವರ್ಷಗಳ ಕಾಲ ರಾಷ್ಟ್ರೀಯ ರಾಜಕಾರಣದಲ್ಲಿಯೇ ಸಂಚಲನ ಸೃಷ್ಟಿಸಿದ್ದ ರಾಜಕೀಯ ಪಕ್ಷ. ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಅಧಿಕಾರವಿಲ್ಲದೇ ವಿರೋಧ ಪಕ್ಷದಲ್ಲಿಯೇ ಉಳಿದುಕೊಂಡಿರುವ ಈ ರಾಜಕೀಯ ಪಕ್ಷ ಅಧಿಕಾರ ಪಡೆದುಕೊಳ್ಳಲು ಹೊಸ ಪ್ಲ್ಯಾನ್ ಒಂದನ್ನು ಮಾಡಿದೆ. ಈ ಮಾಸ್ಟರ್ ಪ್ಲ್ಯಾನ್ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಶ್ರಮಿಸುತ್ತಿದೆ. ಹಾಗಿದ್ದರೇ ಯಾವುದು ಆ ಪಕ್ಷ... ಆ ಪಕ್ಷ ಮಾಡಿರುವ ಮಾಸ್ಟರ್ ಪ್ಲ್ಯಾನ್ ಆದರೂ ಏನು ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್..
ದೇಶ ಹಾಗೂ ರಾಜ್ಯದಲ್ಲಿ ಅಧಿಕಾರ ವಂಚಿತ ಕಾಂಗ್ರೆಸ್ ಗ್ರೌಂಡ್ ಮಟ್ಟದಲ್ಲಿ ಪಕ್ಷ ಸಂಘಟನೆ ಒತ್ತು ನೀಡಿದ್ದು, ಈಗ ಪಾಲಿಕೆ ಚುಕ್ಕಾಣಿ ಹಿಡಿಯುವ ಮೂಲಕವೇ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಆಪರೇಷನ್ ಕಾಂಗ್ರೆಸ್ ಮೂಲಕ ಪಾಲಿಕೆಯ ಗದ್ದುಗೆಯ ಗುದ್ದಾಟದಲ್ಲಿ ಗೆಲ್ಲಲು ಶತಾಯ ಗತಾಯ ಹೋರಾಟ ನಡೆಸುತ್ತಿದೆ.
ಹೌದು. ಬಸವನ ಬಾಗೇವಾಡಿ ಕೈ ಶಾಸಕನಿಂದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯರಿಗೆ ಬಿಗ್ ಆಫರ್ ನೀಡಿದ್ದು, 10 ಜನ ಬಿಜೆಪಿ ಸದಸ್ಯರನ್ನು ಕರೆತಂದವರಿಗೆ ಪಾಲಿಕೆ ಅಧ್ಯಕ್ಷ ಸ್ಥಾನ ಫಿಕ್ಸ್ ಮಾಡಿದ್ದು, ಕೈ ಪಾಳೆಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಬಿಜೆಪಿ ಸದಸ್ಯರನ್ನು ಕರೆದುಕೊಂಡು ಬನ್ನಿ ಎಂದು ಡೈರೆಕ್ಟ್ ಆಗಿ ಆಪರೇಷನ್ ಕೈ ಬಗ್ಗೆ ಪ್ರಸ್ತಾಪ ಮಾಡುವ ಮೂಲಕ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ರಿಂದ ನೂತನ ಸದಸ್ಯರಿಗೆ ಆಫರ್ ನೀಡಿದ್ದಾರೆ.
ಒಟ್ಟಿನಲ್ಲಿ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಇಂತಹದೊಂದು ಆಪರೇಷನ್ ಗೆ ಮುಂದಾಗಿದ್ದು, ಕೈ ಕಮಲ ಜಟಾಪಟಿಯಲ್ಲಿ ಯಾರು ಮೇಯರ್ ಆಗುತ್ತಾರೆ. ಯಾರು ಉಪಮೇಯರ್ ಆಗುತ್ತಾರೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇನ್ನೂ ಬಿಜೆಪಿ ಗೆದ್ದಿದ್ದೇವೆ ಎಂಬುವಂತ ಗರ್ವದಿಂದ ಸುಮ್ಮನಿದ್ದರೇ ಅಧಿಕಾರ ಕೈ ತಪ್ಪಿದರೂ ಅಚ್ಚರಿ ಪಡಬೇಕಿಲ್ಲ...
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
14/09/2021 03:27 pm