ಕುಂದಗೋಳ : ಸ್ಥಳೀಯ ರೈತರ ಸಮಸ್ಯೆ ಅರಿತು ಈಗಾಗಲೇ ಹೆಸರು ಉದ್ದು ಖರೀದಿ ಕೇಂದ್ರ ತೆರೆದಿದ್ದೇವೆ ಅದರಂತೆ ಇಂದು ಯರಿನಾರಾಯಣಪೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಉದ್ಯೋಗ ಖಾತರಿ ಯೋಜನೆಯಡಿ ನೂತನ ರೈತಾಪಿ ಗೂಡೌನ್ ಉದ್ಘಾಟನೆ ಕಂಡಿದೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ಅವರು ಕುಂದಗೋಳ ತಾಲೂಕಿನ ಯರಿನಾರಾಯಣಪೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿರುವ 9 ಲಕ್ಷ ವೆಚ್ಚದ ರೈತಾಪಿ ಗೂಡೌನ್ ಉದ್ಘಾಟನೆ ಮಾಡಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಸದಸ್ಯ ಉಮೇಶ್ ಹೆಬಸೂರ ಮಾತನಾಡಿ ಸರ್ಕಾರದ ಕೊಡಿ ಮಾಡುವ ಸೌಲಭ್ಯಗಳನ್ನು ನಿಮಗೆ ತಲುಪಿಸುವುದೇ ನಮ್ಮ ಜವಾಬ್ದಾರಿ ಎಂದರು.
ಈ ಸಂದರ್ಭದಲ್ಲಿ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಸೊರಟೂರ, ಹಾಗೂ ಸರ್ವ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
12/09/2021 03:49 pm