ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯೇ ಅಧಿಕಾರ ನಡೆಸುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಿ ಬಹುಮತ ಇಲ್ಲವೋ ಅಲ್ಲಿ ಗುದ್ದಾಟ ಇದ್ದೇ ಇರುತ್ತದೆ. ಈ ಗುದ್ದಾಟದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಏನು ತಂತ್ರಗಾರಿಕೆ ಮಾಡಬೇಕೋ ಆ ಎಲ್ಲ ತಂತ್ರಗಾರಿಕೆ ಮಾಡುತ್ತದೆ ಎಂದರು.
ಅದಕ್ಕೆ ಬೇಕಾದ ಕಾರ್ಯ ಚಟುವಟಿಕೆಗಳನ್ನು ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಅವರು ಮಾಡುತ್ತಾರೆ. ಕಲಬುರ್ಗಿಯಲ್ಲಿ ಯಾರ ಜೊತೆ ದೋಸ್ತಿ ಆಗುತ್ತದೆ ಎನ್ನುವುದನ್ನು ಹೇಳುವ ಅಧಿಕೃತ ವ್ಯಕ್ತಿ ನಾನಲ್ಲ. ಆದರೆ, ರಾಜಕಾರಣದಲ್ಲಿ ಯಾರು ಮಿತ್ರರಲ್ಲ ಯಾರೂ ಶತ್ರುಗಳೂ ಅಲ್ಲ ಎಂದಿದ್ದಾರೆ.
ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯಲ್ಲಿ ಯಾರನ್ನು ಮೇಯರ್ ಮಾಡಬೇಕು ಎಂದು ಗೆಜೆಟ್ ನೋಟಿಫಿಕೇಶನ್ ಆಗಬೇಕು, ಚುನಾವಣಾ ಪ್ರಕ್ರಿಯೆ ಆಗಬೇಕು ಎಂದು ಸಚಿವ ಜೋಶಿ ಹೇಳಿದರು.
Kshetra Samachara
11/09/2021 07:09 pm