ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳ ಹುಡುಕಾಟವನ್ನೂ ನಡೆಸುತ್ತಿದೆ. ಉಪಮೇಯರ್ ಸ್ಥಾನಕ್ಕೆ ಸಂಬಂಧಿಸಿದಂತೆ ಶಾಸಕ ಅಮೃತ ದೇಸಾಯಿ ಅವರು ಅಚ್ಛರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
39 ಸ್ಥಾನ ಗೆದ್ದಿರುವ ಬಿಜೆಪಿಗೆ ಸ್ಪಷ್ಟ ಬಹುಮತವಿಲ್ಲ. ಆದರೂ ಪಕ್ಷೇತರರನ್ನು ಕರೆದುಕೊಂಡು ಅಧಿಕಾರ ನಡೆಸುವ ತಯಾರಿ ನಡೆಸುತ್ತಿದೆ. ಧಾರವಾಡ ಗ್ರಾಮೀಣ ಕ್ಷೇತ್ರ ವ್ಯಾಪ್ತಿಗೆ ಬರುವ 9 ವಾರ್ಡ್‌ಗೆ ಸಂಬಂಧಿಸಿದಂತೆ ಈವರೆಗೂ ಯಾರಿಗೂ ಮೇಯರ್ ಸ್ಥಾನ ಸಿಕ್ಕಿಲ್ಲ. 9 ವಾರ್ಡ್ ಪೈಕಿ ಐದು ವಾರ್ಡ್‌ಗಳಲ್ಲಿ ಗೆದ್ದಿರುವ ಬಿಜೆಪಿ ಸದಸ್ಯರಿಗೆ ಮೇಯರ್ ಸ್ಥಾನ ನೀಡಬೇಕೆನ್ನುವ ಬೇಡಿಕೆ ಇಟ್ಟಿದ್ದೇವೆ. ಹಿರಿಯರೊಂದಿಗೂ ಮಾತನಾಡಿದ್ದೇವೆ ಎಂದರು.
ಉಪಮೇಯರ್ ಸ್ಥಾನ ಯಾರಿಗೆ ಕೊಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು 82 ಜನ ಸದಸ್ಯರಿದ್ದಾರೆ ಯಾರಿಗಾದರೊಬ್ಬರಿಗೆ ಉಪಮೇಯರ್ ಸ್ಥಾನ ಕೊಟ್ಟರಾಯ್ತು ಎಂದು ನಸುನಕ್ಕು ಹೇಳಿದರು.
Kshetra Samachara
08/09/2021 06:03 pm