ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿಜೆಪಿಗೆ ದಿನಕ್ಕೊಂದು ವಿಘ್ನ: ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್...!

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ‌ ಮಹಾನಗರ ಪಾಲಿಕೆಯಲ್ಲಿ ಗದ್ದುಗೆ ಹಿಡಿಯಲು ಹೊರಟ ಬಿಜೆಪಿಗೆ ಬಿಗ್ ಶಾಕ್‌ ಎದುರಾಗಿದ್ದು, ಮೇಯರ್ ಸ್ಥಾನ ಪಡೆದುಕೊಳ್ಳುವ ಬಿಜೆಪಿಗೆ ಉಪಮೇಯರ್ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ.

ಬಿಜೆಪಿ ಬಳಿಯಿಲ್ಲ ಉಪ ಮೇಯರ್ ಅಭ್ಯರ್ಥಿಯೇ ಇಲ್ಲವಾಗಿದ್ದು, ಉಪಮೇಯರ್ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿರುವ ಹಿನ್ನಲೆಯಲ್ಲಿ ಬಿಜೆಪಿಯಲ್ಲಿ ಚುನಾಯಿತ ಎಸ್‌ಸಿ ಮಹಿಳಾ ಅಭ್ಯರ್ಥಿಯೇ ಇಲ್ಲವಾಗಿದ್ದು, ಈಗ ಮತ್ತೊಂದು ತಲೆ ನೋವು ಸ್ಟಾರ್ಟ್ ಆಗಿದೆ. ಬಿಜೆಪಿಯಿಂದ ಗೆದ್ದಿರುವ 39 ಸದಸ್ಯರಲ್ಲಿ ಒಬ್ಬರು ಕೂಡ ಎಸ್ಸಿ ಮಹಿಳಾ ಅಭ್ಯರ್ಥಿಗಳಿಲ್ಲ. ಹೀಗಾಗೇ ಹೊಸದೊಂದ ತಲೆ ನೋವು ಸೃಷ್ಠಿಯಾಗಿದ್ದು,‌ 6 ಜನ ಜನಪ್ರತಿನಿಧಿಗಳ ಮತಗಳಿಂದ ಅಧಿಕಾರದಿಂದ ಗದ್ದುಗೆ ಹಿಡಿಯಲು ಹೊರಟಿದ್ದ ಬಿಜೆಪಿ ಉಪಮೇಯರ್ ಅಭ್ಯರ್ಥಿಗಳೇ ಇಲ್ಲವಾಗಿದೆ.

ಇನ್ನೂ ಸದ್ಯ ಮಹಿಳಾ ಅಭ್ಯರ್ಥಿ ಇಲ್ಲದಿರುವ ಹಿನ್ನಲೆ ಕಾಂಗ್ರೆಸ್ ಬಂಡಾಯ ಅಥವಾ ಪಕ್ಷೇತರ ಅಭ್ಯರ್ಥಿ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಎಸ್‌ಸಿ ಮಹಿಳಾ ಮೀಸಲು ಕ್ಷೇತ್ರದಿಂದ ಇಬ್ಬರು ಪಕ್ಷೇತರ ಮಹಿಳಾ ಅಭ್ಯರ್ಥಿ ಗೆಲುವು ಹಿನ್ನಲೆಯಲ್ಲಿ ಅವರ ಬೆಂಬಲ ತೆಗೆದುಕೊಳ್ಳುವ ಅನಿವಾರ್ಯತೆ ಇದೆ. ಅಲ್ಲದೇ ಉಪಮೇಯರ್ ಸ್ಥಾನ ಬಿಟ್ಟು ಕೊಡಬೇಕಾದ ಅನಿವಾರ್ಯತೆಗೆ ಬಿಜೆಪಿ ನಾಯಕರು ಸಿಲುಕಿದ್ದಾರೆ. ಇಬ್ಬರನ್ನೂ ಕಾಂಗ್ರೆಸ್ ಸೆಳೆದರೆ ಹೊಸದೊಂದು ತಲೆ ನೋವು ಸೃಷ್ಟಿಯಾಗುವುದಂತೂ ಸತ್ಯ. ಸರಳವಾಗಿ ಗದ್ದುಗೆ ಏರಲು ಹೊರಟ ಬಿಜೆಪಿಗೆ ದಿನಕ್ಕೊಂದು ವಿಘ್ನ ಎದುರಾಗಿದೆ.

Edited By : Manjunath H D
Kshetra Samachara

Kshetra Samachara

08/09/2021 01:03 pm

Cinque Terre

26.87 K

Cinque Terre

8

ಸಂಬಂಧಿತ ಸುದ್ದಿ