ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ವಾರ್ಡ್ ನಂಬರ್ 3 ರಿಂದ ಸ್ಪರ್ಧಿಸಿ ಜಯಗಳಿಸಿದ ಬಿಜೆಪಿ ಅಭ್ಯರ್ಥಿ ಈರೇಶ ಅಂಚಟಗೇರಿ ಅವರು ಪಾಲಿಕೆ ಸದಸ್ಯರಾದ ಮೊದಲ ದಿನವೇ ಫೀಲ್ಡಿಗಿಳಿದಿದ್ದಾರೆ.
ತಮ್ಮ ವಾರ್ಡಿನಲ್ಲಿ ಕೈಗೊಳ್ಳಬೇಕಾದ ಸ್ವಚ್ಛತಾ ಕಾರ್ಯಗಳ ಬಗ್ಗೆ ಪೌರ ಕಾರ್ಮಿಕರೊಂದಿಗೆ ಚರ್ಚಿಸಿ ತಮಗೆ ಅಗತ್ಯ ಸಹಕಾರ ನೀಡುವಂತೆ ಪೌರ ಕಾರ್ಮಿಕರಿಗೆ ಮನವಿ ಮಾಡಿದ್ದಾರೆ.
ಬೆಳ್ಳಂಬೆಳಿಗ್ಗೆ ಸ್ವಚ್ಛತಾ ಕಾರ್ಯಕ್ಕೆ ಬರುವ ಪೌರ ಕಾರ್ಮಿಕರೊಂದಿಗೆ ವಿವಿಧ ಕಡೆಗಳಲ್ಲಿ ತೆರಳಿದ ಈರೇಶ, ಪೌರ ಕಾರ್ಮಿಕರಿಗೆ ಏನಾದರೂ ಸಮಸ್ಯೆಗಳಿದ್ದಲ್ಲಿ ತಮ್ಮ ಗಮನಕ್ಕೆ ತರುವಂತೆಯೂ ಸೂಚನೆ ನೀಡಿದ್ದಾರೆ.
ಏನೇ ಆಗಲಿ ಅಂಚಟಗೇರಿ ಅವರು ಪಾಲಿಕೆ ಸದಸ್ಯರಾದ ಮರುದಿನವೇ ಫೀಲ್ಡಿಗಿಳಿದು ತಮ್ಮ ವಾರ್ಡಿನ ಸ್ವಚ್ಛತೆ ಬಗ್ಗೆ ಗಮನಹರಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Kshetra Samachara
07/09/2021 09:16 am