ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭಗೊಳ್ಳಲಿದೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ. 82 ವಾರ್ಡ್ ಗಳಲ್ಲಿ 420 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಶೇ. 53.81 ರಷ್ಟು ಮತದಾನವಾಗಿದ್ದು, ಕೃಷಿ ಶೃಂಗ ಸಭಾಂಗಣ ಸೇರಿ ಆರು ಕಡೆ ಮತ ಎಣಿಕೆಗೆ ಸಿದ್ಧತೆ ಮಾಡಲಾಗಿದೆ. 82 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ 420 ಅಭ್ಯರ್ಥಿಗಳ ಅಖಾಡದಲ್ಲಿದ್ದು, ಬಿಜೆಪಿಯ 82, ಕಾಂಗ್ರೆಸ್ ನ 82, ಜೆಡಿಎಸ್ ನ 49, ಎಎಪಿ 41, ಬಿ.ಎಸ್.ಪಿ. 7, ಉತ್ತಮ ಪ್ರಜಾಕೀಯ 11, ಎ.ಐ.ಎಮ್.ಐ.ಎಮ್-12, ಪಕ್ಷೇತರ 122 ಅಭ್ಯರ್ಥಿಗಳ ಭವಿಷ್ಯ ಕೆಲವೇ ಕ್ಷಣಗಳಲ್ಲಿ ನಿರ್ಧಾರವಾಗಲಿದೆ.
ಇನ್ನೂ ಮತ ಎಣಿಕೆ ಹಿನ್ನೆಲೆಯಲ್ಲಿ ಕೃಷಿ ವಿ.ವಿ. ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಜಾರಿ ಮಾಡಿದ್ದು, ಧಾರವಾಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
Kshetra Samachara
06/09/2021 08:28 am