ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹು-ಧಾ ಪಾಲಿಕೆ ಚುನಾವಣೆ: 420ರಲ್ಲಿ 82 ಸ್ಟಾರ್ಸ್ ಯಾರು?

ಹು-ಧಾ ಪಾಲಿಕೆ ಚುನಾವಣೆಯ ಮತ ಎಣಿಕೆ ಇನ್ನೇನು ಕೆಲವೇ ನಿಮಿಷಗಳಲ್ಲಿ ಶುರುವಾಗಲಿದೆ‌. ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು ಈಗಾಗಲೇ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ. ಎಸಿಪಿ ಅನುಷಾ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್ ನಿಯೋಜನೆಯ ನೇತೃತ್ವ ವಹಿಸಿದ್ದಾರೆ.

ಇನ್ನು ಚುನಾವಣಾ ಸಿಬ್ಬಂದಿ ಮತ ಎಣಿಕೆಗೆ ತಯಾರಾಗಿ ಕೂತಿದ್ದಾರೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ನೇತೃತ್ವದಲ್ಲಿ ಸ್ಟ್ರಾಂಗ್ ರೂ‌ಮ್ ತೆರೆದು ಇವಿಎಂ ಗಳನ್ನು ಹೊರತೆಗೆಯಲು ಕೆಲವು ನಿಮಿಷಗಳು ಬಾಕಿ ಇವೆ.

Edited By : Shivu K
Kshetra Samachara

Kshetra Samachara

06/09/2021 07:58 am

Cinque Terre

96.28 K

Cinque Terre

12

ಸಂಬಂಧಿತ ಸುದ್ದಿ