ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾನಗರ ಪಾಲಿಕೆ ಚುನಾವಣೆ: ಇಂದು ಬೆಳಿಗ್ಗೆ 8 ಗಂಟೆಯಿಂದ ಕೃಷಿ ವಿವಿಯಲ್ಲಿ ಮತ ಎಣಿಕೆ

ಧಾರವಾಡ: ಸಪ್ಟೆಂಬರ್ 3ರಂದು ಜರುಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯ ಮತಗಳ ಎಣಿಕೆ ಕಾರ್ಯವು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು (ಸಪ್ಟೆಂಬರ್ 6 ರಂದು) ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮತ ಎಣಿಕೆಗೆ ಸಕಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡಗಳಿಗೆ ಸೆ.3ರಂದು ಚುನಾವಣೆ ಜರುಗಿದ್ದು, 420 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಮತ ಎಣಿಕೆಗೆ 140 ಸಿಬ್ಬಂದಿ; ಮೂರು ಟೇಬಲ್: ನಾಳೆಯ ಮತ ಎಣಿಗೆಗಾಗಿ ಒಟ್ಟು 140 ಜನ ಸಿಬ್ಬಂದಿ ತರಬೇತಿ ನೀಡಿ, ಸಿದ್ಧಗೊಳಿಸಲಾಗಿದೆ. ಪ್ರತಿ ಚುನಾವಣಾಧಿಕಾರಿಗೆ ಮತ ಎಣಿಕೆಗಾಗಿ ಮೂರು ಟೆಬಲ್‌ಗಳನ್ನು ಮಾಡಲಾಗಿದೆ.

ಒಟ್ಟು 16 ಜನ ಚುನಾವಣಾಧಿಕಾರಿಗಳಿದ್ದು ಪ್ರತಿಯೊಬ್ಬರಿಗೆ ಮೂರು ಟೇಬಲ್ ನೀಡಲಾಗಿದ್ದು, ಪ್ರತಿ ಚುನಾವಣಾಧಿಕಾರಿ ಅಧೀನದಲ್ಲಿ ಏಕಕಾಲಕ್ಕೆ ಮೂರು ವಾರ್ಡ್ ಗಳ ಮತ ಎಣಿಕೆ ಕಾರ್ಯ ಆರಂಭವಾಗುತ್ತದೆ. 16 ಚುನಾವಣಾಧಿಕಾರಿಗಳು ಸೇರಿ ಒಟ್ಟು 48 ವಾರ್ಡ್‍ಗಳ ಮತ ಎಣಿಕೆ ಕಾರ್ಯ ಏಕಕಾಲಕ್ಕೆ ಆರಂಭವಾಗುತ್ತದೆ. ಹೀಗೆ ಆಯಾ ವಾರ್ಡ್ ಮತ ಎಣಿಕೆ ಪೂರ್ಣಗೊಂಡ ನಂತರ, ಮತ್ತೊಂದು ವಾರ್ಡ್‍ನ ಮತ ಎಣಿಕೆ ಆರಂಭಿಸುತ್ತಾರೆ. ಮತ್ತು ಚುನಾವಣಾಧಿಕಾರಿಗಳು ತಮ್ಮ ವಾರ್ಡಗಳ ಫಲಿತಾಂಶವನ್ನು ಘೋಷಿಸುತ್ತಾರೆ.

ಒಬ್ಬ ಅಭ್ಯರ್ಥಿ ಪರವಾಗಿ ಒಬ್ಬರಿಗೆ ಮಾತ್ರ ಅವಕಾಶ: ಮತ ಎಣಿಕಾ ಕೇಂದ್ರಕ್ಕೆ ಮತ ಮತ ಎಣಿಕಾ ಏಜಂಟ್, ಸ್ಪರ್ಧಿಸಿರುವ ಅಭ್ಯರ್ಥಿ ಮತ್ತು ಚುನಾವಣಾ ಏಜೆಂಟ್ ಮಾತ್ರ ಬರಲು ಅವಕಾಶವಿದೆ. ಮತ್ತು ಮತಗಳ ಎಣಿಕಾ ಟೇಬಲ್‍ಗೆ ಪ್ರತಿ ವಾರ್ಡ್‍ನ ಮತ ಎಣಿಕೆಗಾಗಿ ಆ ವಾರ್ಡ್‍ಗೆ ಸ್ಪರ್ಧಿಸಿರುವ ಅಭ್ಯರ್ಥಿ ಪರವಾಗಿ ಒಬ್ಬ ಮತ ಎಣಿಕಾ ಏಜೆಂಟ್ ಅಥವಾ ಚುನಾವಣಾ ಏಜೆಂಟ್ ಅಥವಾ ಅಭ್ಯರ್ಥಿ ಮಾತ್ರ ಹಾಜರಾಗಬೇಕು. ಒಬ್ಬ ಅಭ್ಯರ್ಥಿ ಪರವಾಗಿ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

Edited By : Vijay Kumar
Kshetra Samachara

Kshetra Samachara

06/09/2021 07:40 am

Cinque Terre

39.44 K

Cinque Terre

0

ಸಂಬಂಧಿತ ಸುದ್ದಿ