ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಡಿಮೆ ಪ್ರಮಾಣದ ಮತದಾನ: ರಾಷ್ಟ್ರೀಯ ಪಕ್ಷಗಳ ಲೆಕ್ಕಾಚಾರವೇ ಬುಡಮೇಲು....!

ಹುಬ್ಬಳ್ಳಿ: ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಅತೀ ಕಡಿಮೆ ಮತದಾನ ರಾಷ್ಟ್ರೀಯ ಪಕ್ಷಗಳಲ್ಲಿ ನಡುಕವನ್ನುಂಟು ಮಾಡಿದೆ.

ನಿನ್ನೆ ನಡೆದ ಚುನಾವಣೆಯಲ್ಲಿಶೇ. 53.81 ರಷ್ಟು ಮತದಾನ ದಾಖಲಾಗಿದೆ. ಇದು ರಾಜಕೀಯ ಪಕ್ಷಗಳ ಲೆಕ್ಕಾಚಾರ ಬುಡಮೇಲು ಆಗುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಚುನಾವಣೆಗಿಂತ ಶೇ. 13 ರಷ್ಟು ಕಡಿಮೆ ಮತದಾನವಾಗಿದೆ. 2013 ರಲ್ಲಿ ನಡೆದಿದ್ದ ಪಾಲಿಕೆ ಚುನಾವಣೆಯಲ್ಲಿ ಶೇ. 66 ರಷ್ಟು ಮತದಾನವಾಗಿತ್ತು. ಆ ವೇಳೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 67 ವಾರ್ಡ್ ಗಳಿದ್ದವು. ಮರುವಿಂಗಡಣೆ ನಂತರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಗಳ ಸಂಖ್ಯೆ 82 ಕ್ಕೆ ಏರಿಕೆಯಾಗಿದೆ.

ಹುಬ್ಬಳ್ಳಿ - ಧಾರವಾಡ ಕೇಂದ್ರ ವಿಧಾನಪರಿಷತ್ ವ್ಯಾಪ್ತಿಯಲ್ಲಿ ಬಿಜೆಪಿ ಪ್ರಾಬಲ್ಯವಿದೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದೆ. ಇನ್ನೂ ಪಶ್ಚಿಮ ಕ್ಷೇತ್ರ ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲದ ಪೈಪೋಟಿ ಇದೆ. ಇದೆಲ್ಲದರ ನಡುವೆ ಜೆಡಿಎಸ್, ಆಮ್ ಆದ್ಮಿ ಪಕ್ಷ ಹಾಗೂ ಎ ಐ ಎಂ ಐ ಎಂ ಅಖಾಡದಲ್ಲಿದ್ದು, ಈ ಪಕ್ಷಗಳು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮುಳುವಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಇನ್ನು ಈ ಬಾರಿ ಅತಿ ಕಡಿಮೆ ಮತದಾನ ಆಗಿರೋದ್ರಿಂದ ರಾಜಕೀಯ ಪಕ್ಷಗಳ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಲಿದೆ. ಬಿಜೆಪಿ ಮುಖಂಡರ ಲೆಕ್ಕಾಚಾರ ತಿರುಗು ಮುರುಗು ಆಗುವ ಆತಂಕವಿದ್ದು, ಅತಿ ಕಡಿಮೆ ಮತದಾನ ಆಗಿರೋದ್ರಿಂದ ಬಿಜೆಪಿಗೆ ಹೆಚ್ಚು ಹೊಡೆತ ಬೀಳಲಿದೆ. ಕಾಂಗ್ರೆಸ್ ಗೆ ಒಂದಷ್ಟು ಲಾಭ ಆಗುತ್ತೆ ಅನ್ನೋದು ರಾಜಕೀಯ ಲೆಕ್ಕಚಾರವಿದೆ.

ಇದೆಲ್ಲ ಲೆಕ್ಕಾಚಾರಗಳ ನಡುವೆಯೇ ಸ್ಟ್ರಾಂಗ್ ರೂಮ್ ನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ.

Edited By : Shivu K
Kshetra Samachara

Kshetra Samachara

04/09/2021 01:26 pm

Cinque Terre

64.65 K

Cinque Terre

12

ಸಂಬಂಧಿತ ಸುದ್ದಿ