ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಅಂತಿಮವಾಗಿ ಶೇಕಡಾ 53.81 ರಷ್ಟು ಮತದಾನ

ಧಾರವಾಡ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡುಗಳ ಚುನಾವಣೆಯ ಮತದಾನದಲ್ಲಿ ಅಂತಿಮವಾಗಿ ಈ ಬಾರಿ ಶೇಕಡಾ 53.81 ರಷ್ಟು ಮತದಾನವಾಗಿದ್ದು, ಮತದಾನಕ್ಕೆ ಮತದಾರರು ಹಿಂದೇಟು ಹಾಕಿದಂತಿದೆ.

ಹೌದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಗಾಗಿ ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತವಾಗಿ ಮತದಾನ ನಡೆದಿದ್ದು, ಒಟ್ಟು 8,18,096 ಮತದಾರರ ಪೈಕಿ 4,40,251 ಮತದಾರರು ಮತ ಚಲಾಯಿಸಲಾಗಿದೆ. ಶೇಕಡಾ 53.81 ರಷ್ಟು ಮತದಾನವಾಗಿದ್ದು, 82 ವಾರ್ಡ್ ಗಳಲ್ಲಿ ಒಟ್ಟು 842 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅದರಲ್ಲಿ 292 ಸೂಕ್ಷ್ಮ, 93 ಅತೀ ಸೂಕ್ಷ್ಮ ಮತ್ತು 457 ಸಾಮಾನ್ಯ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

Edited By : Nagesh Gaonkar
Kshetra Samachara

Kshetra Samachara

03/09/2021 10:04 pm

Cinque Terre

86.61 K

Cinque Terre

6

ಸಂಬಂಧಿತ ಸುದ್ದಿ