ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಿಗ್ಗೆ 7ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಶೇ.39.22 ಮತದಾನ: ಮಂದಗತಿಯ ಪ್ರಕ್ರಿಯೆ...!

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ರಂಗು ಪಡೆದುಕೊಂಡಿದ್ದು, 82 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾದ ಮತದಾನ ಬೆಳಗಿನ 11 ಗಂಟೆಯವರೆಗೆ ಶೇ.18.18 ರಷ್ಟು ಆಗಿತ್ತು. ಮತ್ತೆ ಮಧ್ಯಾಹ್ನ 1 ಗಂಟೆ ವರೆಗೆ 29.01ರಷ್ಟು ಮತದಾನವಾಗಿತ್ತು. ಈಗ ಮಧ್ಯಾಹ್ನ 3 ಗಂಟೆ ವರೆಗೆ ಶೇ.39.22 ಮತದಾನವಾಗಿದೆ.

ಹೌದು..ಬೆಳಿಗ್ಗೆಯಿಂದ ಜನರ ಮತಗಟ್ಟೆಯ ಬಳಿಯಲ್ಲಿ ಸುಳಿಯಲು ಹಿಂದೇಟು ಹಾಕಿದ್ದರು. ಸಮಯ ಕಳೆಯುತ್ತಿದ್ದಂತೆ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡುತ್ತಿದ್ದಾರೆ. ಸುಡುವ ಬಿಸಿಲಿನಲ್ಲಿಯೂ ಮತದಾನ ಚುರುಕುಗೊಂಡಿತ್ತು. ಆದರೆ ಏನೋ ಗೊತ್ತಿಲ್ಲ ಈ ಬಾರಿ ಚುನಾವಣೆಯಲ್ಲಿ ಮಾತ್ರ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ನೂ ಮತದಾನ ಪ್ರಕ್ರಿಯೆ ಮುಕ್ತಾಯಕ್ಕೆ ಕೆಲವು ಗಂಟೆಗಳು ಬಾಕಿ ಇರುವುದರಿಂದ ಎಷ್ಟರಮಟ್ಟಿಗೆ ಮತದಾನ ಆಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

Edited By : Nirmala Aralikatti
Kshetra Samachara

Kshetra Samachara

03/09/2021 05:15 pm

Cinque Terre

54.69 K

Cinque Terre

4

ಸಂಬಂಧಿತ ಸುದ್ದಿ