ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಈ ಭಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ; ಶಾಸಕ ಬೆಲ್ಲದ

ಧಾರವಾಡ : ಈ ಭಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ, ಮೋದಿ ಅವರು ಮಾಡಿರುವ ಕೆಲಸದ ಮೇಲೆ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಶಾಸಕ ಅರವಿಂದ್ ಬೆಲ್ಲದ ಹೇಳಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣಾ ಮತದಾನಕ್ಕೆ ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದ ಅವರು ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಬೂತಗಳಲ್ಲಿ ಬಿಜೆಪಿ ಮತದಾರರು ಹೆಚ್ಚೆಚ್ಚು ಬರ್ತಾ ಇದ್ದಾರೆ, ಈ ಭಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ, ಮೋದಿ ಅವರು ಮಾಡಿರುವ ಕೆಲಸದ ಮೇಲೆ ಮತ್ತೆ ಅಧಿಕಾರಕ್ಕೆ ಬರುತ್ತೆ. ಐಐಟಿ, ರಸ್ತೆ ಅಭಿವೃದ್ದಿ, ತ್ರಿಬಲ್ ಐಐಟಿ ಸೂಪರ ಸ್ಪೆಷಾಲಿಟಿ ಆಸ್ಪತ್ರೆ ಆಗಿರಬಹುದು, ಇದರ ಮೇಲೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದರು.

ನಂತರ ಗ್ಯಾಸ್ ದರ ಏರಿಕೆ ವಿಚಾರವಾಗಿ ಮಾತನಾಡಿದ ಅವರು ಇಂಟರನ್ಯಾಷನಲ್ ಬೆಲೆ ಏರಿದಕ್ಕೆ ಗ್ಯಾಸ್ ಏರಿಕೆ ಯಾಗಿದೆ. ಮತದಾರ ಪ್ರಭು ಪ್ರಬದ್ದರಾಗಿದ್ದಾರೆ, ಅವರು ವಿಚಾರ ಮಾಡಿ ಮತದಾನ ಮಾಡುತ್ತಾರೆ, ಈ ಭಾರಿ 55 ರಿಂದ 60 ಸೀಟುಗಳು ಗೆಲ್ಲುತ್ತೆ, ಪಕ್ಷೇತರ ಆಬ್ಯರ್ಥಿಗಳಿಂದ ಎನೂ ತೊಂದರೆಯಾಗಲ್ಲ ಎಂದರು.

Edited By : Shivu K
Kshetra Samachara

Kshetra Samachara

03/09/2021 08:51 am

Cinque Terre

40.17 K

Cinque Terre

31

ಸಂಬಂಧಿತ ಸುದ್ದಿ