ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಎಥಿಕ್ಸ್ ಮೇಲೆ ಚುನಾವಣೆ ನಡೆಯುತ್ತಿಲ್ಲ: ಬಸವರಾಜ ಹೊರಟ್ಟಿ ಬೇಸರ....!

ಹುಬ್ಬಳ್ಳಿ: ಎಥಿಕ್ಸ್ ಮೇಲೆ ಚುನಾವಣೆ ನಡೆಯುತ್ತಿಲ್ಲ. ಜನಪರವಾದ ಕೆಲಸ ಎಲ್ಲಿಯವರೆಗೆ ಮಾಡುವುದಿಲ್ಲ ಅಲ್ಲಿಯವರೆಗೂ ಇದು ಹೀಗೆ ನಡೆಯುತ್ತದೆ. ಆಯ್ಕೆಯಾದವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನಮ್ಮದು ಪ್ರಜಾಪ್ರಭುತ್ವ ದೇಶ, ಎಲ್ಲರೂ ಜನಪರ ಕೆಲಸ ಮಾಡಬೇಕು. ಕೊರೋನಾ ಭೀತಿ ಇರುವುದರಿಂದ ಮಾಸ್ಕ್ ಹಾಕದೆ ಇರುವವರಿಗೆ ಮತ ಹಾಕಲು ಅವಕಾಶ ಕೊಡಬಾರದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಲ್ಯಾಮಿಂಗ್ಟನ್ ಹೈಸ್ಕೂಲಿನಲ್ಲಿ ಮತ ಚಲಾವಣೆ ಬಳಿಕ ಮಾತನಾಡಿದರು.

ಜೋಶಿ ಪುತ್ರಿಯ ಮದುವೆಗೆ ಕೋವಿಡ್ ರೂಲ್ಸ್ ಬ್ರೇಕ್ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಡಿಸಿ ಸಹ ರಾಜಕಾರಣಿಗಳ ಕೈಯಲ್ಲಿ ಕೆಲಸ ಮಾಡುವವರು.

ದಕ್ಷತೆಯಿಂದ ಕೆಲಸ ಮಾಡಬೇಕು. ಸದನದಲ್ಲಿ ಈ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದ್ದರೆ. ನಾನು ಸಹ ಈ ಬಗ್ಗೆ ಧ್ವನಿ ಎತ್ತುತ್ತೇನೆ. ನನಗೆ ಮನೆ ಕೊಡುವ ವಿಚಾರವಾಗಿ. 8 ನೇ ಪತ್ರವನ್ನು ಇಂದು ನಾನು ಬರೆಯುತ್ತೇನೆ. ನಾನು ಭಿಕ್ಷೆ ಬೇಡುತ್ತಿಲ್ಲ, ಇನ್ನು ಮುಂದೆ ಕೊಟ್ಟರೆ ಕೊಡಲಿ ಬಿಟ್ಟರೆ ಬಿಡಲಿ. ನಾನು ಇನ್ನು ಮುಂದೆ ಮನೆಯನ್ನು ಕೇಳುವುದಿಲ್ಲ. ಇದು ಸರ್ಕಾರಕ್ಕೆ ನನ್ನ ಕೊನೆಯ ಪತ್ರ ಎಂದು ಬಸವರಾಜ ಹೊರಟ್ಟಿ ಹೇಳಿದರು.

Edited By : Shivu K
Kshetra Samachara

Kshetra Samachara

03/09/2021 08:37 am

Cinque Terre

38.63 K

Cinque Terre

5

ಸಂಬಂಧಿತ ಸುದ್ದಿ