ಕಲಘಟಗಿ: ಕಡೆಗಣಿಸಲ್ಪಟ್ಟಿದ್ದ ಕಾರ್ಮಿಕ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ಮೂಲಕ ರಾಜ್ಯದ ಕಾರ್ಮಿಕ ಕಲ್ಯಾಣಕ್ಕೆ ಶ್ರಮಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.
ಅವರು ದಾಸ್ತ್ತಿಕೊಪ್ಪದ ಹನ್ನೆರಡುಮಠದಲ್ಲಿ ಕಾರ್ಮಿಕ ಅದಾಲತ್ ಉದ್ಘಾಟನೆ ಮಾಡಿ ಮಾತನಾಡಿ,ರಾಜ್ಯದಲ್ಲಿನ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ನೀಡಲು, ಇ-ಶ್ರಮ ಎಂಬ ಯೋಜನೆ ಜಾರಿಗೆ ತರಲಾಗಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಚಾಲನೆ ನೀಡಿ ಒಪ್ಪಿಗೆ ನೀಡಿದ್ದಾರೆ,ಕಾರ್ಮಿಕ ಕಾರ್ಡ್ ಪಡೆಯಲು ಹಣ ನೀಡುವ ಅಗತ್ಯವಿಲ್ಲ ಸರಕಾರವೇ ೧೫ ರೂಪಾಯಿ ಭರಸಿ ಕಾರ್ಮಿಕ ಕಾರ್ಡ್ ನೀಡಲಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಶಾಸಕ ಸಿ ಎಂ ನಿಂಬಣ್ಣವರ ಮಾತನಾಡಿ,ಸ್ಥಳೀಯ ಕಾರ್ಮಿಕ ಇಲಾಖೆಯಲ್ಲಿ ಪೂರ್ಣಾವಧಿ ಕಾರ್ಮಿಕ ನಿರೀಕ್ಷಕ ಇಲ್ಲದೇ ತೊಂದಯಾಗಿದೆ ಕಾರ್ಮಿಕ ನಿರೀಕ್ಷಕರ ನೇಮಕ ಶೀಘ್ರ ಮಾಡಲು ವಿನಂತಿಸಿದರು.
ಶ್ರೀ ರೇವಣಶಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ಸಾನಿಧ್ಯವಹಿಸಿದ್ದರು.ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
02/09/2021 07:53 pm