ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾರ್ಡ್ ಸೇವೆ ಮಾಡಲು ಪಲ್ಲಾಟಿ ಕುಟುಂಬಕ್ಕೆ ಮಣೆ ಹಾಕಿದ ಶಾಸಕ ಅಬ್ಬಯ್ಯ

ಹುಬ್ಬಳ್ಳಿ- ಅವರು ನಿರಂತರ ವಾರ್ಡ್ ಅಭಿವೃದ್ಧಿಗಾಗಿ ಶ್ರಮಿಸಿದವರು. ಶಾಸಕರ ಅನುದಾನದಡಿಯಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದವರು. ಈಗ ಆ ಕುಟುಂಬದ ಕಾರ್ಯವೈಖರಿ ಮೆಚ್ಚಿದ ಶಾಸಕರು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಇನ್ನೂ ಇವರಿಗೆ ಬೆಂಬಲವಾಗಿ ಸಂಪೂರ್ಣ ವಾರ್ಡ್ ಜನತೆ ನಿಂತಿದ್ದಾರೆ ಅಷ್ಟಕ್ಕೂ ಅವರು ಯಾರು ಅಂತಿರಾ ಈ ಸ್ಟೋರಿ ನೋಡಿ.

ಹೌದು,,,, ಜನಪ್ರಿಯ ಶಾಸಕ ಪ್ರಸಾದ್ ಅಬ್ಬಯ್ಯ ಅವರ ಆತ್ಮೀಯ ರಾಕೇಶ್ ಪಲ್ಲಾಟಿ, ಕಳೆದ ಹದಿಮೂರು ವರ್ಷಗಳಿದ ನಿರಂತರವಾಗಿ ಕಾಂಗ್ರೆಸ್ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕಾರ್ಯ ಚಾತುರ್ಯತೆ, ಹಾಗೂ ಸಮಾಜ ಸೇವೆ ಮೆಚ್ಚಿದ ಕಾಂಗ್ರೆಸ್ ನಾಯಕರು ವಾರ್ಡ್ ನಂಬರ್ 80 ರಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವರ ತಾಯಿಯಾದ ಯಲ್ಲಮ್ಮ ಪಲ್ಲಾಟಿ ಅವರಿಗೆ ಟಿಕೆಟ್ ನೀಡಿದ್ದಾರೆ.

ಟಿಕೆಟ್ ಪಡೆದ ಅವರು ಈಗ ಭರ್ಜರಿ ಪ್ರಚಾರದೊಂದಿಗೆ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಇವರು ಮಾಡಿರುವ ಅಭಿವೃದ್ಧಿ ಲಿಸ್ಟ್‌ ಹೀಗಿದೆ. ಶಾಸಕರ ಅನುದಾನಡಿಯಲ್ಲಿ ಒಂಬತ್ತು ಸಿಸಿ ರಸ್ತೆಗಳು, ತುಳಜಾ ಭವಾನಿ ದೇವಸ್ಥಾನಕ್ಕೆ 32 ಲಕ್ಷ ರೂ, ಸುಂದರ ಸಮುದಾಯ ಭವನ, ಲೋಕೋಪಯೋಗಿ ಇಲಾಖೆಯಿಂದ 75 ಲಕ್ಷ ರೂ ಶಾಸಕರ ಶ್ರಮದಡಿಯ ನೇಕಾರ ನಗರದಲ್ಲಿ ಸುಂದರ ಸಿಸಿ ರಸ್ತೆ ನಿರ್ಮಾಣ, ಸೇರಿದಂತೆ 150 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್, ಸ್ಮಾರ್ಟ್ ಪ್ರೌಢಶಾಲೆ ನಿರ್ಮಾಣ, ಕೊರೊನಾ ಸಂದರ್ಭದಲ್ಲಿ ಫುಡ್ ಕಿಟ್ ನೀಡಿ ವಾರ್ಡ್ ಜನತೆಗೆ ಬಹಳ ಹತ್ತಿರವಾಗಿದ್ದಾರೆ. ಅಷ್ಟೇ ಅಲ್ಲದೇ ಅವರ ಮುಂದಿನ ಕಾರ್ಯ ಏನೆಂಬುದನ್ನು ಅವರಿಂದಲೆ ಕೇಳಿ....

ಇನ್ನು ಕಾಂಗ್ರೆಸ್ ಶಾಸಕರ ಹಲವಾರು ಕಾಮಗಾರಿಯನ್ನು ತಂದು, ತಮ್ಮ ವಾರ್ಡ ಅಭಿವೃದ್ಧಿ ಮಾಡಿರುವ ರಾಕೇಶ್ ಪಲ್ಲಾಟಿ ಅವರ ತಾಯಿಗೆ ಶೇಕಡಾ 80 ರಷ್ಟು ಜನರು ಈಗಾಗಲೇ ಬೆಂಬಲ ಸೂಚಿಸಿದ್ದಾರೆ. ಇವರು ಪಾಲಿಕೆ ಸದಸ್ಯರಾದ ಮೇಲೆ ಹಲವಾರು ಅಭಿವೃದ್ಧಿ ಕಾರ್ಯ ಮಾಡುವುದು ಹಾಗೂ ವಾರ್ಡನಲ್ಲಿ ಹಲವಾರು ಕುಟುಂಬಗಳಿಗೆ ಮನೆ ನಿರ್ಮಾಣ, ಪ್ರತಿಯೊಂದು ಕುಟುಂಬಕ್ಕೆ ನೀರಿನ ಸೌಲಭ್ಯ, ಹಕ್ಕು ಪತ್ರಗಳು ಸೇರಿದಂತೆ ಇನ್ನುಳಿದ ಎಲ್ಲಾ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ.

ನಿಮಗೆ ಅಧಿಕಾರ ಇಲ್ಲದ ಸಮಯದಲ್ಲಿ ಇಷ್ಟೆಲ್ಲಾ ಜನರ ಸಂಕಷ್ಟಕ್ಕೆ ಸ್ಪಂದಿಸಿರುವ ನಿಮಗೆ ನಮ್ಮ ಬೆಂಬಲ ಸಧಾ ಇರುತ್ತದೆ ನಿಮ್ಮ ಗೆಲವು ನಿಶ್ಚಿತ ಎಂದು ಅಲ್ಲಿಯ ಜನರೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಅಪಾರ ಜನ ಬೆಂಬಲ ಹೊಂದಿದ ಪಲ್ಲಾಟಿ ಕುಟುಂಬ ಪಾಲಿಕೆ ಚುನಾವಣೆಯಲ್ಲಿ ಗೆದ್ದು ವಾರ್ಡ್ ನ್ನು ಇನ್ನಷ್ಟು ಅಭಿವೃದ್ಧಿ ಮಾಡಲಿ ಎಂದು ಅಲ್ಲಿನ ಜನ ಶುಭ ಹಾರೈಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

01/09/2021 05:09 pm

Cinque Terre

76.81 K

Cinque Terre

7

ಸಂಬಂಧಿತ ಸುದ್ದಿ