ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 38ನೇ ವಾರ್ಡಿನಲ್ಲಿ ತಿಪ್ಪಣ್ಣ ಮಜ್ಜಿಗಿಯವರ ಪರ ಮಾಜಿ ಸಿಎಂ ಅಬ್ಬರದ ಪ್ರಚಾರ...!

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ನಾಯಕ ಅಭಿವೃದ್ಧಿ ಹರಿಕಾರ ಎಂದೇ ಕರೆಯಿಸಿಕೊಳ್ಳುವ ವಾರ್ಡ್ ನಂಬರ 38ರ ಬಿಜೆಪಿ ಅಭ್ಯರ್ಥಿ ತಿಪ್ಪಣ್ಣ ಮಜ್ಜಿಗಿಯವರ ಪರವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರ ನಡೆಸಿದ್ದಾರೆ.

ಹೌದು..ಈಗಾಗಲೇ ವಾಯುಪುತ್ರ ಬಡಾವಣೆ ಸಾಯಿನಗರ,ಸಿದ್ಧಕಲ್ಯಾಣ ನಗರ, ಟೀಚರ್ ಕಾಲೋನಿ, ಸಿದ್ಧಪ್ಪಜ್ಜನವರ ದೇವಸ್ಥಾನದ ಮುಂಭಾಗ, ಕೊಪ್ಪಳ ಲೇಔಟ್, ಸಿದ್ದಗಂಗಾನಗರ, ಗುರು ಗೋವಿಂದ ನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಪ್ರಚಾರ ಚುರುಕಾಗಿದ್ದು, ಎಲ್ಲೆಡೆಯೂ ಜನಬೆಂಬಲ ವ್ಯಕ್ತವಾಗುತ್ತಿದೆ. ಅಲ್ಲದೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಪ್ಪಣ್ಣ ಮಜ್ಜಿಗಿಯವರ ಅಭಿವೃದ್ಧಿ ಕಾರ್ಯ ಹಾಗೂ ಕೇಂದ್ರ, ರಾಜ್ಯ ಸರ್ಕಾರದ ಕಾರ್ಯಗಳ ಕುರಿತು ಜನರಿಗೆ ಮನವರಿಕೆ ಮಾಡುತ್ತಿದ್ದಾರೆ.

ಇನ್ನೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಂದ ಜನರ ಮನಸ್ಸಿನಲ್ಲಿ ಜಾಗೆ ಪಡೆದ ಬಿಜೆಪಿ ನಾಯಕ ತಿಪ್ಪಣ್ಣ ಮಜ್ಜಿಗಿಯವರಿಗೆ ಜನರು ಮತ್ತೊಮ್ಮೆ ಅಧಿಕಾರವನ್ನು ನೀಡುವ ಮೂಲಕ ಆಶೀರ್ವಾದ ಮಾಡಲು ನಿರ್ಧಾರ ಕೈಗೊಂಡಿದ್ದಾರೆ.

Edited By : Shivu K
Kshetra Samachara

Kshetra Samachara

31/08/2021 11:16 am

Cinque Terre

25.94 K

Cinque Terre

0

ಸಂಬಂಧಿತ ಸುದ್ದಿ