ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಭಿವೃದ್ಧಿಯ ಹರಿಕಾರ ಬೀರಪ್ಪ ಖಂಡೇಕಾರ: ಜನಪರ ಕಾರ್ಯಗಳಿಂದಲೇ ಗುರುತಿಸಿಕೊಂಡಿರುವ ಜನನಾಯಕ

ಹುಬ್ಬಳ್ಳಿ: ಹುಸಿ ಆಶ್ವಾಸನೆಗಳು ಮಾತನಾಡಬಾರದು ಅಭಿವೃದ್ಧಿಯೇ ನಮ್ಮ ಹೆಸರನ್ನು ಹೇಳುವಂತಾಗಬೇಕು ಎಂಬುವಂತ ಮಾತಿಗೆ ಇಲ್ಲೊಬ್ಬ ಜನನಾಯಕ ಸಾಲು ಸಾಲು ಅಭಿವೃದ್ಧಿ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ನಿರೀಕ್ಷೆಗೆ ಮೀರಿದ ಅಭಿವೃದ್ಧಿಗಳಿಂದ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಜನನಾಯಕ. ಹಾಗಿದ್ದರೇ ಯಾರು ಜನಮೆಚ್ಚಿದ ಜನನಾಯಕ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್..

ಹೀಗೆ ಕಾಮಗಾರಿಗಳ ವೀಕ್ಷಣೆ ಮಾಡುತ್ತ ಜನರ ಅಹವಾಲುಗಳನ್ನು ಆಲಿಸುತ್ತಿರುವ ಈ ಜನನಾಯಕನೇ ಬೀರಪ್ಪ ನಾಗಪ್ಪ ಖಂಡೇಕಾರ. ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಕೀರ್ತಿ ಈ ಜನನಾಯಕನಿಗೆ ಸಲ್ಲುತ್ತದೆ. ಈ ಹಿಂದೇ ಕೂಡ ಪಾಲಿಕೆಯ ಸದಸ್ಯರಾಗಿದ್ದ ಖಂಡೇಕಾರ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.

ಇನ್ನೂ ವಿಶೇಷ ಅಂದರೆ ಪಾಲಿಕೆಯ ಅಧಿಕಾರ ಅವಧಿ ಮುಗಿದ ಸಂದರ್ಭದಲ್ಲಿ ಕೂಡ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. 24×7 ಕುಡಿಯುವ ನೀರು, 24×7 ಸಿಲಿಂಡರ್ ಸರಬರಾಜು ಯೋಜನೆ, ಉದ್ಯಾನವನ, ರಸ್ತೆ, ಚರಂಡಿ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳ ಮೂಲಕ ಜನಮನ್ನಣೆ ಪಡೆದ ಜನನಾಯಕ ಬೀರಪ್ಪ ಖಂಡೇಕಾರ ಹಾಗಿದ್ದರೇ ಅವರ ಅಭಿವೃದ್ಧಿ ಕಾರ್ಯದ ಬಗ್ಗೆ ಅವರ ಬಾಯಿಂದಲೇ ಕೇಳಿ..

ಇನ್ನೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ವಾರ್ಡ್ ನಂಬರ 43 ರಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಜನರ ಸೇವೆಗೆ ಮತ್ತೊಂದು ಅವಕಾಶ ಕೋರಿದ್ದಾರೆ. ಅಲ್ಲದೆ ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯನ್ನು ಪ್ರತಿಯೊಂದು ಜನರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾರ್ಗದರ್ಶನದಲ್ಲಿ ಸಾಕಷ್ಟು ಯೋಜನೆಯನ್ನು ಜಾರಿಗೊಳಿಸಿ ಮಾದರಿ ವಾರ್ಡ್ ನಿರ್ಮಾಣ ಮಾಡಿದ್ದಾರೆ. ಅವರ ಕಾರ್ಯದ ಕುರಿತು ಜನರೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..

ಈಗಾಗಲೇ ಕುಡಿಯುವ ನೀರಿನ ವ್ಯವಸ್ಥೆ, ಅಡುಗೆ ಅನಿಲ ಸರಬರಾಜು, ಗಂಗಾ ಕಲ್ಯಾಣ ಯೋಜನೆಯಲ್ಲಿ ಕೃಷಿ ಕುಟುಂಬಕ್ಕೆ ಬೋರವೇಲ್, ನಿರುದ್ಯೋಗಿ ಯುವಕರಿಗೆ ಆಟೋ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಕಾರ್ ಕೊಡಿಸುವ ಮೂಲಕ ಯುವ ಸಮುದಾಯದ ಸ್ವಾವಲಂಬಿ ಬದುಕಿಗೆ ಸಾಕ್ಷಿಯಾಗಿದ್ದಾರೆ.

ಅಧಿಕಾರ ಇರಲಿ ಇಲ್ಲದಿರಲಿ ಜನರ ಸೇವೆಗೆ ಸಿದ್ಧ ಎಂಬುವಂತ ಆಶಾಭಾವನೆ ಹೊಂದಿರುವ ಬೀರಪ್ಪ ಖಂಡೇಕಾರ ಅವರಿಗೆ ಜನರು ಸಾಕಷ್ಟು ಬೆಂಬಲ ನೀಡಿದ್ದು, ಇವರು ಮಾಡಿದ ಅಭಿವೃದ್ಧಿ ಕಾರ್ಯಗಳೇ ಇವರ ಚುನಾವಣೆ ಪ್ರಚಾರ ಮಾಡುತ್ತಿದ್ದು ಮತ್ತೊಮ್ಮೆ ಅಭಿವೃದ್ಧಿ ಸರದಾರ ಬೀರಪ್ಪ ಖಂಡೇಕಾರ ವಿಜಯಶಾಲಿಯಾಗಿ ಬರಲಿ ಎಂದು ಮತದಾರರು ಹಾರೈಸಿದ್ದಾರೆ.

Edited By : Shivu K
Kshetra Samachara

Kshetra Samachara

31/08/2021 08:59 am

Cinque Terre

90.25 K

Cinque Terre

15

ಸಂಬಂಧಿತ ಸುದ್ದಿ