ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಭಿವೃದ್ಧಿ ಹರಿಕಾರನ ಕೈ ಬಿಡದ ವಾರ್ಡಿನ ಮತದಾರರು

ಹುಬ್ಬಳ್ಳಿ: ಇವರು ಜನರ ಮನಸ್ಸು ಗೆದ್ದಿರುವ ಧೀರ, ವಾರ್ಡ್ ಜನರಿಗೆ ತಂಬಾ ಪ್ರೀತಿ. ಪಕ್ಷವೇ ಕೈ ಬಿಟ್ಟರು ಸಹ ವಾರ್ಡ್ ಜನತೆ ಮಾತ್ರ ಕೈ ಬಿಡಲಿಲ್ಲ. ಹೌದು ಅಷ್ಟಕ್ಕೂ ಅವರು ಯಾರು ಅಂತೀರಾ ನಾವು ತೋರಸ್ತೇವಿ ನೋಡಿ.

ಸಹಾಯಕ್ಕೆ ಎತ್ತಿದ ಕೈ, ಸಮಸ್ಯೆ ಬಂದರೆ ಸಮಯ ನೋಡದೆ ಸ್ಪಂದಿಸುವ ಜನ ನಾಯಕ, 82 ನೆ ವಾರ್ಡ್ ಅಂದರೆ ಸಾಕು ಮೊದಲಿಗೆ ನೆನಪಿಗೆ ಬರುವುದು ಮೋಹನ ಅಸುಂಡಿ. ಆದರೆ ಈ ಬಾರಿ ಆ ವಾರ್ಡಿಗೆ ಮಹಿಳಾ ಮೀಸಲಾತಿ ಬಂದಿದ್ದರಿಂದ, ಅಲ್ಲಿನ ಜನರ ಒತ್ತಾಯದ ಮೇರೆಗೆ ಮೋಹನ ಅವರು ತಮ್ನ ಧರ್ಮ ಪತ್ನಿ ಅಕ್ಷತಾ ಅವರನ್ನು ಕಣಕ್ಕಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ವರ್ಷಗಳಿಂದ ಕಾರ್ಯಕರ್ತರಾಗಿದ್ದ ಶ್ರೀಮತಿ ಅಕ್ಷತಾ ಅವರಿಗೆ ಟಿಕೆಟ್ ನೀಡದ ಕಾರಣ, ಅಲ್ಲಿನ ಜನರ ಒತ್ತಾಯದ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ, ಟ್ರಾಕ್ಟರ್ ಚಿಹ್ನೆಯೊಂದಿಗೆ ಕ್ರಮ ಸಂಖ್ಯೆ 3 ಕ್ಕೆ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.

ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ಸಕ್ರೀಯವಾಗಿರುವ ಮೋಹನ ಅಸುಂಡಿ ಅವರು, ಕಳೆದ ಬಾರಿ ಪಾಲಿಕೆ ಸದಸ್ಯರಾಗಿ ವಾರ್ಡ್ ನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಅದೆಷ್ಟೋ ಬಡ ಜನರ ಹಸಿವನ್ನು ತೀರಿಸಿದ ಕರುಣಾಮಯಿ. ಇನ್ನು ಕೊರೊನಾ ಸಂಕಷ್ಟ ಸಮಯವಲ್ಲದೇ ಸದಾ ಕಾಲ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮೋಹನ ಅಸುಂಡಿ ಹಾಗೂ ಮತ್ತವರ ಕುಟುಂಬ, ಒಂದಿಲ್ಲೊಂದು ಕಾರ್ಯ ಮಾಡುತ್ತಲೇ ಇರುತ್ತದೆ. ವಾರ್ಡ್ ನಲ್ಲಿ ಎಲ್ಲ ಸಮಾಜದ ಜನರೊಂದಿಗೆ ಹಾಗೂ ಮಾಜಿ ಪಾಲಿಕೆ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ವಾರ್ಡ್ ನ ಏಳಿಗಾಗಿ ಶ್ರಮಿಸಿದ್ದಾರೆ‌.

ವಾರ್ಡ್ ನಲ್ಲಿ ನೀರಿನ ಸಮಸ್ಯೆ, ಶೌಚಾಲಯ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳಿಗಾಗಿ ಮುಂದೆ ನಿಂತು ಹೋರಾಟ ಮಾಡಿರುವ ಮೋಹನ ಅಸುಂಡಿ ಅವರು, ಜನರಿಗೆ ಕುಡಿಯಲು ಶುದ್ದ ನೀರಿನ ಘಟಕ ನಿರ್ಮಾಣ ಮಾಡಿಸಿದ್ದಾರೆ. ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಹಲವಾರು ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಅದೆಷ್ಟೋ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ. ಅಲ್ಲದೆ ವಿಧವಾ ವೇತನ ಸೇರಿದಂತೆ ಇನ್ನಿತರ ಯೋಜನೆಗಳನ್ನು ಜನರ ಮನೆ ಮನೆಗೆ ತಲುಪಿಸಿದ್ದಾರೆ. ಇನ್ನು ಮೋಹನ ಅಸುಂಡಿ ಅವರ ಪತ್ನಿ ಅಕ್ಷತಾ ಅವರು ಸಹ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ. ಈ ದಿಸೆಯಲ್ಲಿ ಮೋಹನ ಅಸುಂಡಿ ಕುಟುಂಬದಿಂದ ಇನ್ನಷ್ಟು ಕೆಲಸವಾಗಬೇಕೆಂಬ ದೃಷ್ಟಿಯಿಂದ ವಾರ್ಡ್ ಜನರು, ಪಕ್ಷ ಹಾಗೂ ಜಾತಿ ಭೇದ ಮರೆತು ಬೆಂಬಲಿಸುತ್ತಿದ್ದಾರೆ.

ಒಟ್ಟಿನಲ್ಲಿ ವಾರ್ಡ್ ನ ಜನರು ಈ ಬಾರಿ ಅಕ್ಷತಾ ಮೋಹನ ಅಸುಂಡಿ ಅವರಿಗೆ ಬೆಂಬಲಿಸಿ, ವಾರ್ಡ್ ಸರ್ವತೋಮುಖ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕೆಂದು ಮಾಜಿ ಪಾಲಿಕೆ ಸದಸ್ಯರು ಸಹ ಮನವಿ ಮಾಡಿದ್ದಾರೆ.

Edited By : Shivu K
Kshetra Samachara

Kshetra Samachara

30/08/2021 05:11 pm

Cinque Terre

84.29 K

Cinque Terre

8

ಸಂಬಂಧಿತ ಸುದ್ದಿ