ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ನಾಯಕ ಅಭಿವೃದ್ಧಿ ಹರಿಕಾರ ಎಂದೇ ಕರೆಯಿಸಿಕೊಳ್ಳುವ ವಾರ್ಡ್ ನಂಬರ 38ರ ಬಿಜೆಪಿ ಅಭ್ಯರ್ಥಿ ತಿಪ್ಪಣ್ಣ ಮಜ್ಜಿಗಿಯವರು ಈಗಾಗಲೇ ಕಳೆದ ಮೂರು ದಿನಗಳಿಂದ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಈಗಾಗಲೇ ವಾಯುಪುತ್ರ ಬಡಾವಣೆ ಸಾಯಿನಗರ,ಸಿದ್ಧಕಲ್ಯಾಣ ನಗರ, ಟೀಚರ್ ಕಾಲೋನಿ, ಸಿದ್ಧಪ್ಪಜ್ಜನವರ ದೇವಸ್ಥಾನದ ಮುಂಭಾಗ, ಕೊಪ್ಪಳ ಲೇಔಟ್, ಸಿದ್ದಗಂಗಾನಗರ, ಗುರು ಗೋವಿಂದ ನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಪ್ರಚಾರ ಚುರುಕಾಗಿದ್ದು, ಎಲ್ಲೆಡೆಯೂ ಜನಬೆಂಬಲ ವ್ಯಕ್ತವಾಗುತ್ತಿದೆ.
ಇನ್ನೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಂದ ಜನರ ಮನಸ್ಸಿನಲ್ಲಿ ಜಾಗೆ ಪಡೆದ ಬಿಜೆಪಿ ನಾಯಕ ತಿಪ್ಪಣ್ಣ ಮಜ್ಜಿಗಿಯವರಿಗೆ ಜನರು ಮತ್ತೊಮ್ಮೆ ಅಧಿಕಾರವನ್ನು ನೀಡುವ ಮೂಲಕ ಆಶೀರ್ವಾದ ಮಾಡಲು ನಿರ್ಧಾರ ಕೈಗೊಂಡಿದ್ದಾರೆ.
Kshetra Samachara
30/08/2021 01:55 pm