ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿಜೆಪಿ ಪಕ್ಷ ದೇಶದ ಇತಿಹಾಸಕ್ಕೆ ಕಳಂಕ ತಂದಿದೆ- ಕೆಪಿಸಿಸಿ ವಕ್ತಾರ ನಿಕೇತ ರಾಜ ಮೌರ್ಯ ಕಿಡಿ

ಹುಬ್ಬಳ್ಳಿ: ಬಿಜೆಪಿ ಕೇಂದ್ರ ಸರ್ಕಾರ ಸ್ಥಾಪನೆ ಮಾಡಿದ ಭಾರತೀಯ ಐತಿಹಾಸಿಕ ಸಂಶೋದನಾ ಕೇಂದ್ರ (ಐಸಿಎಚ್ ಆರ್.) ಇತ್ತೀಚೆಗೆ ಬೀಡುಗಡೆ ಮಾಡಿದ ಪತ್ರಿಕೆಯಲ್ಲಿ ದೇಶದ ಮೊದಲ ಪ್ರಧಾನಿ ನೆಹರು ಅವರನ್ನು ಕಡೆಗಣಿಸಿದ್ದಾರೆ ಮತ್ತೆ ಇತಿಹಾಸಕ್ಕೆ ಕಳಂಕ ತಂದಿದ್ದಾರೆ ಎಂದು ಕೆಪಿಸಿಸಿ ವಕ್ತಾರ ನಿಕೇತ ರಾಜ ಮೌರ್ಯ ಹೇಳಿದರು.

ನಗರದಲ್ಲಿ ಮಾತನಾಡಿ ಅವರು, ದೇಶದ ಜನತೆಗೆ ಇತಿಹಾಸದ ಹೆಜ್ಜೆ ಗುರುತು ತಿಳಿಸಲು ಪ್ರಾರಂಭಿಸಿದ ಈ ಸಂಸ್ಥೆಯಿಂದ ನೆಹರು ಅವರ ಭಾವಚಿತ್ರ ಇದರಿಂದ ಹೊರಗಿಟ್ಟು ದೊಡ್ಡ ಅಪಪ್ರಚಾರ ಮಾಡಿದ್ದಾರೆ ಎಂದರು.ಬಿಜೆಪಿ ಸರ್ಕಾರ ಜನರ ಅಭಿವೃದ್ಧಿಗೋಸ್ಕರ ರಾಜಕೀಯ ಮಾಡಲ್ಲಾ. ಬರಿ ಮೂರ್ತಿ ಸ್ಥಾಪಿಸುವುದು, ಗುಡಿ ಗುಂಡಾರ ಕಟ್ಟಿಸುವಲ್ಲಿ ಕೆಲಸಕ್ಕೆ ಸೀಮಿತರಾಗಿದ್ದಾರೆ ಎಂದು ಟೀಕಿಸಿದರು.

ಮಹಾನಗರ ಪಾಲಿಕೆ ಎರಡು ಬಾರಿ ಅಧಿಕಾರದಲ್ಲಿದ್ದವರು ಏನು ಅಭಿವೃದ್ಧಿ ಮಾಡಿದ್ದಾರೆ. ಏಳು ಬಾರಿ ಶಾಸಕರಾಗಿ ರಾಜ್ಯದ ಮುಖ್ಯ ಮಂತ್ರಿಯಾಗಿ ನಗರದಲ್ಲಿ ಕುಡಿಯುವ ನೀರು ಮತ್ತು ರಸ್ತೆಯನ್ನು ಸುಧಾರಿಸಲು ಆಗಿಲ್ಲ ಎಂದು ಹೇಳಿದರು. ಹು-ಧಾದಲ್ಲಿ ಬಿಜೆಪಿಯಲ್ಲಿ ಮಹನಿಯರು ಅನಿಸಿಕೊಂಡ ಪ್ರಮುಖ ನಾಯಕರು ಇದ್ದು ಯಾವುದೇ ಅಭಿವೃದ್ಧಿ ಮಾಡಿಲ್ಲ. ಇವರು ತಮ್ಮ ಮನೆಯಿಂದ ವಿಮಾನ ನಿಲ್ದಾಣವರೆಗೂ ರಸ್ತೆ ಮಾಡಿಕೊಂಡಿದ್ದಾರೆ ಎಂದರು.

ಪಾಲಿಕೆ ಚುನಾವಣೆ ಹಿನ್ನೆಲೆ ಯಾವ ಮುಖ ಇಟ್ಟುಕೊಂಡು ಹೋಗಿ ಮತ ಕೇಳುತ್ತಾರೆ ಗೊತ್ತಿಲ್ಲ. ಜನರು ಇವರನ್ನು ಶಪಿಸುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ, ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಮಾಜಿ ಶಾಸಕ ಎಂ.ಎಸ್ ಅಕ್ಕಿ ಇದ್ದರು.

Edited By : Manjunath H D
Kshetra Samachara

Kshetra Samachara

30/08/2021 12:50 pm

Cinque Terre

50.6 K

Cinque Terre

25

ಸಂಬಂಧಿತ ಸುದ್ದಿ