ಧಾರವಾಡ: ವಾರ್ಡ್ ನಂಬರ್ 15 ರಿಂದ ಚುನಾವಣಾ ಕಣಕ್ಕಿಳಿದಿರುವ ಪಾಲಿಕೆ ಮಾಜಿ ಸದಸ್ಯ ದೀಪಕ ಚಿಂಚೋರೆ ಅವರ ಪುತ್ರ ಅನಿರುದ್ಧ ಚಿಂಚೋರೆ ಅವರ ಪರವಾಗಿ ಅಲೆ ಬೀಸಿದ್ದು, ಪ್ರಸಕ್ತ ವರ್ಷ ಅನಿರುದ್ಧ ಅವರ ಗೆಲುವು ಪಕ್ಕಾ ಎಂದೇ ಹೇಳಲಾಗುತ್ತಿದೆ.
40 ವರ್ಷಗಳಿಂದ ಕಾಂಗ್ರೆಸ್ ಗೆಲ್ಲದೇ ಟಫ್ ವಾರ್ಡ್‌ನ್ನೇ ತಮ್ಮ ಮಗನಿಗಾಗಿ ಆಯ್ಕೆ ಮಾಡಿಕೊಂಡಿರು ದೀಪಕ ಚಿಂಚೋರೆ ಅಲ್ಲಿ ಕೈ ಗೆಲ್ಲಿಸುವ ಮೂಲಕ ತಮ್ಮ ಮಗನ ಭವಿಷ್ಯ ಕಟ್ಟಿಕೊಡಲು ಹೊರಟಿದ್ದಾರೆ.
ಈಗಾಗಲೇ ಅನಿರುದ್ಧ ಅವರು ವಾರ್ಡ್‌ನಲ್ಲಿ ಸಾಕಷ್ಟು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ದೀಪಕ ಚಿಂಚೋರೆ ಕೂಡ ತಮ್ಮದೇ ಶಕ್ತಿ ಬಳಸಿ ಮತದಾರರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಇತ್ತ ಅನಿರುದ್ಧ ಅವರ ತಾಯಿ ಹಾಗೂ ಪತ್ನಿ ಕೂಡ ಪ್ರಚಾರ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಕೂಡ ಅನಿರುದ್ಧ ಅವರೊಂದಿಗೆ ಮನೆ, ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದು, ಅನಿರುದ್ಧ ಅವರ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
Kshetra Samachara
30/08/2021 10:46 am