ಹುಬ್ಬಳ್ಳಿ: ಈತ ಹಿಡಿದ ಕಾರ್ಯವನ್ನು ಕೈ ಬಿಡದೇ ಮುನ್ನೆಡೆಸುವ ಚಾತುರ್ಯತೆ ಹೊಂದಿದ ಯುವಕ. ಸಾರ್ವಜನಿಕರ ಸಮಸ್ಯೆ ಅಂದರೆ ಸಾಕು ಎಲ್ಲವನ್ನು ಬದಿಗಿಟ್ಟು ಎದೆತಟ್ಟಿ ನಿಲ್ಲುವ ಸರದಾರ. ಯುವಕರ ಅಚ್ಚುಮೆಚ್ಚಿನ ಹುಬ್ಬಳ್ಳಿಯ ಸಾರಥಿ. ಈಗ ಜನರ ಸೇವೆಗೆ ಪಣತೊಟ್ಟು ಪಾಲಿಕೆ ಚುನಾವಣೆಯ ಕಣಕ್ಕೆ ಇಳಿದಿದ್ದಾರೆ.
ಹೀಗೇ ಸರಳ ಸಜ್ಜನ ವ್ಯಕ್ತಿತ್ವ ಹೊಂದಿರುವ ಬೇರಾರು ಅಲ್ಲ ಚೇತನ ಎಸ್. ಹಿರೆಕೆರೂರ. ಹಲವಾರು ವರ್ಷಗಳಿಂದ ಯುವಕರಿಗೆ ಹಾಗೂ ಬಡವರಿಗೆ ಸಹಾಯ ಹಸ್ತ ಚಾಚುತ್ತಾ ಬಂದಿರುವ ಇವರು ವಾರ್ಡ ಜನರ ಒತ್ತಾಯ ಮೇರೆಗೆ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ, ವಾರ್ಡ್ ನಂಬರ್ 52 ಕ್ಕೆ ಆಟೋ ಚಿಹ್ನೆಯೊಂದಿಗೆ ಕ್ರಮ ಸಂಖ್ಯೆ 6 ರಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.
ಇನ್ನು ತಮ್ಮ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಕನಸು ಕಂಡಿರುವ ಇವರಿಗೆ, ಬೆನ್ನಲುಬಾಗಿ ಯುವಕರ ಪಡೆಯೊಂದು ಹಗಲಿರುಳು ಶ್ರಮಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ವಾರ್ಡ್ ನಂಬರ್ 52 ಜನರು ರಸ್ತೆ, ಆ ಶುದ್ದ ಕುಡಿಯುವ ನೀರು, ಒಳಚರಂಡಿ, ಬೀದಿದೀಪ, ಉದ್ಯಾನವನ, ರಸ್ತೆ ಅಗಲೀಕರಣ ಸೇರಿದಂತೆ ಹತ್ತು ಹಲವು ಜನರ ಬೇಡಿಕೆಗಳಿಗಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ಆದರೆ ಈವರೆಗೆ ಯಾವುದೋ ಕಾಮಗಾರಿ ಪೂರ್ಣ ಕಾಣದ ಕಾರಣ, ಅಪೂರ್ಣ ಕಾಮಗಾರಿಗಳನ್ನು ಪೂರ್ಣ ಮಾಡಲು ಸ್ವತಃ ಚೇತನ ಹಿರೇಕೇರೂರ ಅಖಾಡಕ್ಕೆ ಇಳಿದಿದ್ದು, ಆಯ್ಕೆ ಆದರೆ ಅವರ ಮುಂದಿನ ಅಜೆಂಡಾ ಅವರಿಂದಲೆ ಕೇಳಿ.
52 ನೇ ವಾರ್ಡಿನ ಸಮಗ್ರ ಅಭಿವೃದ್ಧಿಗೆ ನಮ್ಮ ದೃಢ ಸಂಕಲ್ಪ.ಬದಲಾವಣೆ ಅಭಿವೃದ್ಧಿಯ ಸಂಕೇತ, ಪರಿವರ್ತನೆ ಜಗದ ನಿಯಮ, ಅಭಿವೃದ್ಧಿ ಪ್ರಜಾಪ್ರಭುತ್ವದ ನಿಯಮದಂತೆ ಚೇತನ ಅವರ ಬೆನ್ನೆಲುಬಾಗಿ ಹಲವಾರು ಸಂಘಟನೆಗಳು ನಿಂತಿವೆ.
ಇನ್ನು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಯ್ಕೆ ಆದ ಬೆನ್ನಲ್ಲೇ ಹದಗೆಟ್ಟಿರುವ ಒಳಚರಂಡಿ ವ್ಯವಸ್ಥೆ ಆಧುನೀಕರಣಗೊಳಿಸುವುದು, ಸ್ಲಂ ಮನೆಗಳಿಗೆ ಹಕ್ಕುಪತ್ರ ನೀಡಿ ಶಾಶ್ವತ ವಸತಿ ಸೌಲಭ್ಯ ಕಲ್ಪಿಸುವುದು, ಕಸಮುಕ್ತ ವಾರ್ಡ್ ಮಾಡುವುದು, ಸೇರಿದಂತೆ ತಮ್ಮ ವಾರ್ಡನ್ನು ಸ್ಮಾರ್ಟ್ ವಾರ್ಡ್ ಮಾಡಲು ಪಣತೊಟ್ಟಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಅದೆಷ್ಟೋ ಬಡ ಜನರ ಹಸಿವನ್ನು ನೀಗಿಸಿದ್ದಾರೆ. ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ಅಷ್ಟಕ್ಕೂ ಇವರು ಅಧಿಕಾರ ಇಲ್ಲದಿದ್ದರೂ ಜನರಿಗೆ ಯಾವ ರೀತಿ ಸಹಾಯ ಮಾಡಿದ್ದಾರೆ ಎಂಬುದನ್ನು ಆ ವಾರ್ಡ್ ಜನರಿಂದಲೆ ಕೇಳಿ..
ಸರಳ ಸಜ್ಜನ ವ್ಯಕ್ತಿತ್ವ ಹೊಂದಿರುವ ಚೇತನ ಅವರಿಗೆ, ವಾರ್ಡ್ ನ ಜನರು ಬೆಂಬಲಿಸಿ ಸರ್ವತೋಮುಖ ಅಭಿವೃದ್ಧಿಗೆ ಅವಕಾಶ ಮಾಡುತ್ತಾರೆ ಎಂಬ ಭರವಸೆ ಎಲ್ಲರಲ್ಲೂ ಇದೆ.
Kshetra Samachara
29/08/2021 03:39 pm