ಹುಬ್ಬಳ್ಳಿ: ಈ ಯುವತಿ ಸಾಕಷ್ಟು ವಿದ್ಯಾವಂತೆ. BE. M.Tech ಓದಿರುವ ಇವರು ಕೈತುಂಬ ಸಂಬಳ ಬರುವ ಉದ್ಯೋಗ ಮಾಡಿಕೊಂಡು ಹಾಯಾಗಿರಬಹುದಿತ್ತು. ಆದರೆ ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಉಂಟು ಮಾಡಿ ಎಲ್ಲರ ಭವಿಷ್ಯ ಉಜ್ವಲವಾಗಬೇಕು ಎಂಬ ಛಲ ತೊಟ್ಟು ಈ ನಿರ್ಧಾರಕ್ಕೆ ಬಂದಿದ್ದಾರೆ.
ಸಮಾಜ ಸುಧಾರಣೆಯ ದೃಷ್ಟಿಕೋನ ಹೊಂದಿರುವ ಕಾಂಚನಾ ಅವರು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಮೂಲಕ ನಿಜವಾದ ಅಭಿವೃದ್ಧಿಗೆ ನಾಂದಿ ಹಾಡಲಿದ್ದಾರೆ. ಹಾಗಿದ್ದರೇ ಯಾರು ಆ ಯುವತಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್..
ತೊಟ್ಟಿಲನ್ನು ತೂಗುವ ಕೈ ಜಗತ್ತನೇ ಆಳಬಹುದು ಎಂಬುವಂತ ಸಾಕಷ್ಟು ನಿರ್ದರ್ಶನಗಳಿಗೆ ನಮ್ಮ ನಾಡಿನ ಮಹಿಳೆಯರು ಸಾಕ್ಷಿಯಾಗಿದ್ದಾರೆ. ತಾವು ಎಂ.ಟೆಕ್ ಆಗಿದ್ದರೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು, ಏನಾದರೂ ಅಭಿವೃದ್ಧಿ ಮಾಡಬೇಕು ಎಂಬ ಸದುದ್ದೇಶದಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ 27 ರಿಂದ ಕಾಂಚನಾ ಮಾಲಗಾರ ಸ್ಪರ್ಧಿಸಿದ್ದಾರೆ.
ಈಗಾಗಲೇ ವಾರ್ಡಿನ ಸಾಕಷ್ಟು ಸಮಸ್ಯೆ ಅರಿತಿರುವ ಕಾಂಚನಾ, ಕಲಿತ ವಿದ್ಯೆಯನ್ನು ಸಮಾಜದ ಏಳಿಗೆಗಾಗಿ ವಿನಿಯೋಗಿಸಬೇಕು ಎಂಬ ಅಭಿಲಾಷೆಯೊಂದಿಗೆ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ತಮ್ಮ ಬಾಲ್ಯ ಜೀವನದಿಂದಲೇ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಸೇವೆಯ ಅನುಭವ ಪಡೆದಿರುವ ಕಾಂಚನಾ ಅವರು ಬಿ.ಇ ಎಂ.ಟೆಕ್ ಪದವಿ ಪಡೆದರೂ ಕೂಡ ಯಾವುದೇ ಐಷಾರಾಮಿ ಬದುಕಿಗೆ ಮಣೆಹಾಕದೇ ಸಮಾಜವನ್ನು ಸುಧಾರಿಸಿ ಶಿಕ್ಷಣ, ಆರೋಗ್ಯ, ಸಾರ್ವಜನಿಕ ಸಮಸ್ಯೆಗೆ ಧ್ವನಿಯಾಗಬೇಕು. ಯುವ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಪಣತೊಟ್ಟಿದ್ದಾರೆ.
ಈಗಾಗಲೇ ಸಾಕಷ್ಟು ಸರ್ಕಾರಿ ವಲಯದಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ಕಾಂಚನಾ ಈ ಬಾರಿ ಚುನಾವಣೆಯಲ್ಲಿ ವಿಜಯಶಾಲಿಯಾಗಿ ನಮ್ಮೆಲ್ಲರ ಕಷ್ಟಗಳನ್ನು ಬಗೆಹರಿಸಲಿ ಎಂದು ಸಾರ್ವಜನಿಕರು ಆಶಿಸಿದ್ದಾರೆ.
ಇನ್ನೂ 27ನೇ ವಾರ್ಡಿನಿಂದ ಪ್ರಬಲ ಅಭ್ಯರ್ಥಿಯಾಗಿ ಹತ್ತು ಹಲವಾರು ಅಭಿವೃದ್ಧಿ ಕನಸನ್ನು ಕಂಡಿರುವ ಕಾಂಚನಾ ಅವರಿಗೆ ಸಾರ್ವಜನಿಕರು ಸಾಕಷ್ಟು ಬೆಂಬಲ ಸೂಚಿಸಿದ್ದಾರೆ. ಇನ್ನೂ ದೇವರ ಆಶೀರ್ವಾದದಿಂದ ಕಾಂಚನಾ ಅವರು ಜಯಭೇರಿ ಬಾರಿಸಲಿ ಎಂದು ಮತದಾರರು ಆಶೀರ್ವದಿಸಿದ್ದಾರೆ.
Kshetra Samachara
29/08/2021 09:56 am